Tuesday, 15 December 2020

ಮೋದಿ ಸರ್ಕಾರಕ್ಕೆ ಬಂಡವಾಳಶಾಹಿಗಳು ಸ್ನೇಹಿತರು, ರೈತರು ಖಲಿಸ್ತಾನಿಗಳು : ರಾಹುಲ್ ಗಾಂಧಿ ಕಿಡಿ


 ಮೋದಿ ಸರ್ಕಾರಕ್ಕೆ ಬಂಡವಾಳಶಾಹಿಗಳು ಸ್ನೇಹಿತರು, ರೈತರು ಖಲಿಸ್ತಾನಿಗಳು : ರಾಹುಲ್ ಗಾಂಧಿ ಕಿಡಿ

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ರಾಹುಲ್ ಗಾಂಧಿ ಬಂಡವಾಳಶಾಹಿಗಳು ಮೋದಿ ಸರ್ಕಾರದ ಆಪ್ತ ಸ್ನೇಹಿತರು, ರೈತರು ಖಲಿಸ್ತಾನಿಗಳು ಎಂದು ಆರೋಪಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕಳೆದ ಹಲವು ದಿನಗಳಿಂದ ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಮಸೂದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರಕ್ಕೆ ಭಿನ್ನಾಭಿಪ್ರಾಯ ಇರುವ ವಿದ್ಯಾರ್ಥಿಗಳು ದೇಶ ವಿರೋಧಿಗಳು, ನಾಗರೀಕರು ಅರ್ಬನ್ ನಕ್ಸಲರು, ವಲಸೆ ಕಾರ್ಮಿಕರು ಕೋವಿಡ್ ವಾಹಕಗಳು, ಪ್ರತಿಭಟನಾ ರೈತರು ಖಲಿಸ್ತಾನಿಗಳು ಮತ್ತು ಕ್ಯಾಪಿಟಲಿಸ್ಟ ‌ಗಳು ಉತ್ತಮ ಸ್ನೇಹಿತರು ಆಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.


SHARE THIS

Author:

0 التعليقات: