Wednesday, 23 December 2020

ತ್ರಿವಳಿ ತಲಾಖ್ ಜಾರಿಗೆ ತಂದ ಪಕ್ಷ ನನಗೆ ವಿಚ್ಛೇದನ ನೀಡುವಂತೆ ನನ್ನ ಪತಿಯನ್ನು ಕೇಳುತ್ತಿದೆ: ಬಿಜೆಪಿ ವಿರುದ್ಧ ಸೌಮಿತ್ರ ಖಾನ್ ಪತ್ನಿ ಟೀಕೆ


 ತ್ರಿವಳಿ ತಲಾಖ್ ಜಾರಿಗೆ ತಂದ ಪಕ್ಷ ನನಗೆ ವಿಚ್ಛೇದನ ನೀಡುವಂತೆ ನನ್ನ ಪತಿಯನ್ನು ಕೇಳುತ್ತಿದೆ: ಬಿಜೆಪಿ ವಿರುದ್ಧ ಸೌಮಿತ್ರ ಖಾನ್ ಪತ್ನಿ ಟೀಕೆ

ಕೋಲ್ಕತ್ತಾ: ಬಿಜೆಪಿ ವಿರುದ್ಧ ಹರಿಹಾಯ್ದಿರುವ ಟಿಎಂಸಿ ನಾಯಕಿ ಸುಜಾತ ಮೊಂಡಾಲ್ ಯಾವ ಪಕ್ಷ ತ್ರಿವಳಿ ತಲಾಖ್ ನ್ನು ಜಾರಿಗೆ ತಂದಿತ್ತೋ ಅದೇ ಪಕ್ಷ ಇಂದು ನನ್ನ ಪತಿ ಸೌಮಿತ್ರ ಖಾನ್ ಗೆ ಪತ್ನಿಗೆ ವಿಚ್ಛೇದನ ನೀಡುವಂತೆ ಕೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಬಿಜೆಪಿಯಲ್ಲೇ ಇದ್ದ ಸುಜಾತಾ ಮೊಂಡಾಲ್ ಅವರು ಪಕ್ಷ ತೊರೆದು ಟಿಎಂಸಿ ಸೇರಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಬಿಜೆಪಿ ನಾಯಕ ಹಾಗೂ ಬಿಷ್ಣುಪುರ್ ನ ಸಂಸದ ಸುಮಿತ್ರ ಖಾನ್ ತಮ್ಮ ಪತ್ನಿಗೆ ವಿಚ್ಛೇದನ ನೀಡುವಂತೆ ಕೇಳಿ ನೊಟೀಸ್ ಕಳಿಸಿದ್ದರು.

ಎಎನ್‌ಐ ಜೊತೆ ಮಾತನಾಡಿರುವ ಸುಜಾತ ಮೊಂಡಾಲ್, ರಾಜಕೀಯ ವೈಯಕ್ತಿಕ ಜೀವನಗಳಲ್ಲಿ ಪ್ರವೇಶಿಸಿದಾಗ ಸಂಬಂಧಗಳು ಹಾಳಾಗುತ್ತವೆ. ನನ್ನ ವಿರುದ್ಧ ಸುಮಿತ್ರ ಅವರನ್ನು ಎತ್ತಿಕಟ್ಟುವ ಬಿಜೆಪಿ ಮಂದಿಯ ಸಹವಾಸದಲ್ಲಿ ಅವರಿದ್ದಾರೆ. ತ್ರಿವಳಿ ತಲಾಖ್ ಜಾರಿಗೆ ತಂದಿದ್ದ ಪಕ್ಷವೇ ಈಗ ನನ್ನ ಪತಿಗೆ ವಿಚ್ಛೇದನ ನೀಡುವಂತೆ ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ ನಿಲುವುಗಳ ಕಾರಣದಿಂದಾಗಿ ಭದ್ರತೆ ಹಾಗೂ ಗೌರವಕ್ಕಾಗಿ ನಾನು ಬಿಜೆಪಿ ತೊರೆದು ಟಿಎಂಸಿಗೆ ಸೇರಿದ್ದೇನೆ ಎಂದು ಸುಜಾತ ಮೊಂಡಾಲ್ ಸ್ಪಷ್ಟನೆ ನೀಡಿದ್ದಾರೆ.


SHARE THIS

Author:

0 التعليقات: