Saturday, 26 December 2020

ಬೆಲೆ ಕುಸಿತ; ಸಂಕಷ್ಟದಲ್ಲಿಬಾಳೆ ಬೆಳೆದ ರೈತರು


ಬೆಲೆ ಕುಸಿತ; ಸಂಕಷ್ಟದಲ್ಲಿಬಾಳೆ ಬೆಳೆದ ರೈತರು

ಅಫಜಲಪುರ: ತಾಲ್ಲೂಕಿನಲ್ಲಿ ಕಳೆದ ವರ್ಷ ಡಿಸೆಂಬರ್, ಜನವರಿಯಲ್ಲಿ ನಾಟಿ ಮಾಡಿದ ಬಾಳೆ ಬೆಳೆ ಸದ್ಯಕ್ಕೆ ಕಟಾವಿಗೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವ ಕಾರಣ ಬಾಳೆ ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 200 ಎಕರೆಯಲ್ಲಿ ಬಾಳೆ ಬೆಳೆಯಲಾಗಿದೆ. 1 ವರ್ಷದಿಂದ ಗೊಬ್ಬರ ಹಾಕಿ, ಬೆಳೆಸಿರುವ ಬಾಳೆಗೆ ಬೆಲೆ ಬರುತ್ತಿಲ್ಲ. ಪ್ರತಿ ಕ್ವಿಂಟಲ್‌ಗೆ ₹ 500 - ₹ 600 ಬೆಲೆ ಕೇಳುತ್ತಿದ್ದಾರೆ. 2 ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹ 800 - ₹900 ಇತ್ತು. ಆದರೆ ಈಗ ದಿಢೀರನೆ ಬೆಲೆ ಕುಸಿತವಾಗಿದೆ. ಹೀಗಾಗಿ ರೈತರಿಗೆ ಖರ್ಚು ಸಹ ಮರಳಿ ಬರುತ್ತಿಲ್ಲ ಎನ್ನುತ್ತಾರೆ ರೈತರು.

ಬಾಳೆ ಬೆಳೆಗಾರರಾದ ಚಂದ್ರಶೇಖರ ಕರಜಗಿ, ಹಜ್ಜು ಪಟೇಲ್ ಮಾತನಾಡಿ, ಬಾಳೆ ಬೆಳೆಯಲು ಸಾಕಷ್ಟು ಖರ್ಚು ಮಾಡಿದ್ದೇವೆ. ಕಳೆದ ಒಂದು ವರ್ಷದಿಂದ ಕೊವಿಡ್‌ನಿಂದ ಬಾಳೆ ಹಣ್ಣುಗಳ ದರ ಕುಸಿದಿದೆ. ಪಕ್ಕದ ಮಹರಾಷ್ಟ್ರಕ್ಕೆ ಬಾಳೆ ಹಣ್ಣುಗಳು ಸಾಗಾಟವಾಗುತ್ತಿಲ್ಲ. ಸ್ಥಳೀಯವಾಗಿ ಮಾರಾಟವಾಗುವದರಿಂದ ಬೆಲೆ ಏರಿಕೆಯಾಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದು ಹಾನಿ ಅನುಭವಿಸಿದಂತಾಗಿದೆ. ಮುಂಗಾರಿಯಲ್ಲಿ ಬೆಳೆಹಾನಿಯಾಗಿದ್ದಕ್ಕೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಸರ್ಕಾರ ಶೀಘ್ರ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಬಾಳೆ ಬೆಳೆ ಬೆಳೆದು ಹಾಳಾಗಿದ್ದೇವೆ. ಸರ್ಕಾರ ಮುಂಗಾರು ಹಂಗಾಮಿನ ಬೆಳೆ ಪರಿಹಾರವಾದರೂ ತಕ್ಷಣ ನೀಡಬೇಕು.SHARE THIS

Author:

0 التعليقات: