ಅತಿವೃಷ್ಠಿಯಿಂದ 'ಬೆಳೆಹಾನಿ'ಕೊಂಡ ರೈತರಿಗೆ ಗುಡ್ ನ್ಯೂಸ್ : ರೈತರಿಗೆ ಐದು ಹಂತಗಳಲ್ಲಿ 'ಪರಿಹಾರಧನ ಜಮೆ'
ವಿಜಯಪುರ : ಜಿಲ್ಲೆಯಲ್ಲಿ ಅಗಸ್ಟ್ -2020 ರಿಂದ ಇಲ್ಲಿಯವರೆಗೆ ಮಳೆ, ಪ್ರವಾಹದಿಂದ ಕೃಷಿ, ತೋಟಗಾರಿಕೆ ಬೆಳೆ ಹಾನಿಯಾದ ಒಟ್ಟು 94099.83 ಹೇಕ್ಟರ್ ಕ್ಷೇತ್ರದ 1.03.483 ಫಲಾನುಭವಿಗಳ ಖಾತೆಗಳಿಗೆ ಒಟ್ಟು 7360.50 ರೂ.ಲಕ್ಷ ಪರಿಹಾರಧನ ಜಮೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಅದರಂತೆ ಬೆಳೆ ಹಾನಿಯ ವಿವರ : ಪರಿಹಾರ ತಂತ್ರಾಂಶದಲ್ಲಿ ಎಂಟ್ರಿ ಮಾಡಬೇಕಾದ ಹಾನಿಯ ಕ್ಷೇತ್ರ (ಹೇ.ಗಳಲ್ಲಿ) : 2,33,155.39 ಆಗಿದ್ದು, ಪರಿಹಾರ ತಂತ್ರಾಂಶದಲ್ಲಿ ಎಂಟ್ರಿ ಮಾಡಿದ ರೈತರ ಸಂಖ್ಯೆ : 2.25.380 ಆಗಿರುತ್ತದೆ.
ಜಿಲ್ಲೆಯಲ್ಲಿ ಐದು ಹಂತಗಳಲ್ಲಿ ಒಟ್ಟು 1.03.483 ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾದ ಮೊತ್ತ : 7360.50 ಲಕ್ಷ ರೂ. ಆಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
0 التعليقات: