Thursday, 10 December 2020

ಸಬ್‌ಇನ್ಸ್ ಪೆಕ್ಟರ್ ನಿಂದ ಮಹಿಳಾ ಪಿಎಸ್‌ಐ ಗೆ ಮೋಸ; ಪೊಲೀಸ್ ಠಾಣೆ ಮೆಟ್ಟಿಲೇರಿದ ಆರಕ್ಷಕಿ


 ಸಬ್‌ಇನ್ಸ್ ಪೆಕ್ಟರ್ ನಿಂದ ಮಹಿಳಾ ಪಿಎಸ್‌ಐ ಗೆ ಮೋಸ; ಪೊಲೀಸ್ ಠಾಣೆ ಮೆಟ್ಟಿಲೇರಿದ ಆರಕ್ಷಕಿ

ಮೈಸೂರು: ಆರಕ್ಷಕರೇ ಇಂತಹ ತಪ್ಪು ದಾರಿ ಹಿಡಿದರೆ ಜನಸಾಮಾನ್ಯರ ಪಾಡೇನು..? ಸಬ್‌ಇನ್ಸ್ ಪೆಕ್ಟರ್ ಒಬ್ಬರಿಂದ ಮಹಿಳಾ ಪಿಎಸ್ ಐ ಮೋಸ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸಬ್‌ಇನ್ಸ್ ಪೆಕ್ಟರ್ ಆನಂದ್ ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಪಿಎಸ್‌ಐ ಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಮಹಿಳಾ ಪಿಎಸ್‌ಐ ಸಬ್‌ಇನ್ಸ್ ಪೆಕ್ಟರ್ ಆನಂದ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆನಂದ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂಬುದು ಮಹಿಳಾ ಪಿಎಸ್‌ಐ ದೂರು.


SHARE THIS

Author:

0 التعليقات: