Saturday, 26 December 2020

ತಮಿಳುನಾಡಿನಲ್ಲಿ ವ್ಯಕ್ತಿಗತ ರಾಜಕಾರಣ ನಡೆಯಲ್ಲ, ಈಗ ಅಂತಹ ನಾಯಕರೂ ಇಲ್ಲ: ಅಣ್ಣಾಮಲೈ


ತಮಿಳುನಾಡಿನಲ್ಲಿ ವ್ಯಕ್ತಿಗತ ರಾಜಕಾರಣ ನಡೆಯಲ್ಲ, ಈಗ ಅಂತಹ ನಾಯಕರೂ ಇಲ್ಲ: ಅಣ್ಣಾಮಲೈ

ಮೈಸೂರು: ತಮಿಳುನಾಡಿನಲ್ಲಿ ವ್ಯಕ್ತಿಗತ ರಾಜಕಾರಣ ನಡೆಯಲ್ಲ. ಈಗ ಅಂತಹ ಯಾವ ನಾಯಕರೂ ಇಲ್ಲ. ರಜನಿಕಾಂತ್, ಕಮಲ್ ಹಾಸನ್ ಮುಂತಾದ ಚಿತ್ರನಟರು ರಾಜಕೀಯ ಪ್ರವೇಶ ಮಾಡಿದ್ದಾರೆ. ಇದರಿಂದಾಗಿ ರಾಜಕೀಯದಲ್ಲಿ ಸ್ಪೇಸ್ ಕ್ರಿಯೇಟ್ ಆಗಿದೆ. ಇದನ್ನು ಬಳಸಿಕೊಂಡು ಬಿಜೆಪಿ ಬೆಳೆಯಲಿದೆ ಎಂದು ತಮಿಳುನಾಡು ಬಿಜೆಪಿ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಮಲೈ ತಿಳಿಸಿದ್ದಾರೆ.

ಹಿರಿಯ ವಕೀಲ ಓ.ಶಾಮಭಟ್ ಅವರ “ಬೆಂಕಿಯ ಚೆಂಡು ಕುಯಿಲಿ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಕೀಯ ಅಂದರೇ ತುಂಬಾ ಕಷ್ಟ. ಬಹಳ ಪ್ರವಾಸ ಮಾಡುತ್ತಿದ್ದೇನೆ. ತಮಿಳುನಾಡಿನಲ್ಲಿ ಮೊದಲಿನಿಂದಲೂ ದ್ರಾವಿಡ ರಾಜಕಾರಣ ಇದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾಲ್ಕೈದು ದಶಕಗಳಿಂದ ವ್ಯಕ್ತಿಗತ ರಾಜಕಾರಣ ನಡೆದಿದೆ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಹೀಗೆ ವ್ಯಕ್ತಿ ಆಧಾರಿತ ರಾಜಕಾರಣ ನಡೆದಿದೆ. ಈಗ ಅಂತಹ ಪರಿಸ್ಥಿತಿ ಇಲ್ಲ. ತಮಿಳುನಾಡಿನಲ್ಲಿ ಹಲವಾರು ಹಿರಿಯ ನಾಯಕರಿದ್ದಾರೆ. ಕೇಂದ್ರ ಸಚಿವರಾಗಿ ಕೆಲಸ ಮಾಡಿದವರೂ ಇದ್ದಾರೆ. ನಾನು ಸಾಮಾನ್ಯ ಕಾರ್ಯಕರ್ತ ಮಾತ್ರ. ನಮ್ಮೆಲ್ಲರ ನಾಯಕ ಪ್ರಧಾನಿ ಮೋದಿ ಮಾತ್ರ ಎಂದರು.

ಕಳೆದ ಆರು ವರ್ಷಗಳಲ್ಲಿ ಭಾರತ ಪುನಶ್ಚೇತನಗೊಳ್ಳುತ್ತಿದೆ. ಪರಕೀಯರು ಹಾಕಿಕೊಟ್ಟ ಹಾದಿಯಲ್ಲೇ ನಾವೆಲ್ಲ ನಡೆಯುತ್ತಿದ್ದೆವು. ಆರು ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ಭಾರತದ ರಿಯಲ್ ಹೀರೋಗಳನ್ನು ಪಠ್ಯದಲ್ಲಿ ಪರಿಚಯಿಸಲಾಗಿದೆ. ಅತ್ಯಂತ ಸರಳವಾದ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ.

ಇದನ್ನು ಸಹಿಸದ ಕೆಲವು ಪ್ರತಿಪಕ್ಷಗಳು ಜೋರು ದನಿಯಲ್ಲಿ ಬೊಬ್ಬೆ ಹಾಕುತ್ತಿದ್ದಾರೆ. ದೆಹಲಿ ಗಡಿಯಲ್ಲಿ 7- 8 ಲಕ್ಷ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಏನೇ ಒಳ್ಳೆಯ ಕೆಲಸ ಮಾಡಲು ಹೊರಟರೂ ವಿರೋಧ ಮಾಡುವುದು ಪ್ರತಿಪಕ್ಷಗಳಿಗೆ ರೂಢಿಯಾಗಿದೆ. ಆದ್ದರಿಂದಲೇ ಪ್ರತಿ ಆರು ತಿಂಗಳಿಗೊಮ್ಮೆ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ.

ನೋಟ್ ಬ್ಯಾನ್, ಸಿಎಎ, ಈಗ ಸರಳವಾದ ಕೃಷಿ ಕಾಯ್ದೆಗಳು ಹೀಗೆ ಪದೇ ಪದೇ ಪ್ರತಿಭಟನೆಗಳು ನಡೆಯುತ್ತಿವೆ. ಭಾರತದ ಬದಲಾಗುತ್ತಿದೆ. ಯುವ ಸಮೂಹ ಬದಲಾಗಲು ಇದು ಸಕಾಲ. ಯಾರ ಪರವಾಗಿ ನಿಲ್ಲಬೇಕು ಎಂಬುದು ನಿಮ್ಮ ನಿರ್ಧಾರ ಎಂದು ಮೈಸೂರಿನಲ್ಲಿ ಅಣ್ಣಮಲೈ ತಿಳಿಸಿದರು.SHARE THIS

Author:

0 التعليقات: