ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಸುಮ್ನೆ ಚಿಕನ್ ತಿನ್ಲಾ: ಸಿದ್ದರಾಮಯ್ಯ
ಮೈಸೂರು: ಇಂದು ಎಲ್ಲೆಡೆ ಹನುಮ ನಾಮ ಜಪ ನಡೆಯುತ್ತಿದೆ. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ, 'ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಸುಮ್ನೆ ಚಿಕಿನ್ ತಿನ್ಲಾ…' ಎಂದು ಸ್ನೇಹಿತರೊಬ್ಬರಿಗೆ ಹೇಳಿದ್ದಾರೆ.
2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಭಾನುವಾರ ನಡೆದಿದ್ದು, ಓಟು ಹಾಕಲು ಸ್ವಗ್ರಾಮ ಸಿದ್ದರಾಮನಹುಂಡಿಗೆ ಬಂದ ಸಿದ್ದರಾಮಯ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದರು. ಬಾಲ್ಯದ ಗೆಳೆಯ ಸಿದ್ದರಾಮನಹುಂಡಿ ಗ್ರಾಮದ ಕೆಂಪೀರಯ್ಯ ಅವರ ಮನೆಯಲ್ಲಿ ಮಾಂಸಾಹಾರ ಭೋಜನ ಸಿದ್ಧಪಡಿಸಲಾಗಿತ್ತು. ಈ ವೇಳೆ 'ಅಣ್ಣ ಇಂದು ಹನುಮ ಜಯಂತಿ. ಇವತ್ತು ನಾನ್ವೆಜ್ ತಿನ್ನೋದಾ?' ಎಂದು ಗ್ರಾಮಸ್ಥರೊಬ್ಬರು ಸಿದ್ದರಾಮಯ್ಯಗೆ ಹೇಳಿದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ, 'ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ಲಾ. ಹನುಮ ಹುಟ್ಟಿದ ದಿನಾಂಕ ಗೊತ್ತಿದ್ರೆ ಮಾಡಬೇಕು. ಗೊತ್ತಿಲ್ಲ ಅಂದ್ರೆ ಚಿಕನ್ ತಿನ್ನು' ಎಂದರು. ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!
ಮುದ್ದೆ, ನಾಟಿ ಕೋಳಿ ಸಾರು ಸವಿದ ಸಿದ್ದರಾಮಯ್ಯ, ಭೋಜನದ ನಂತರ ಎಲೆ-ಅಡಿಕೆ ಜಿಗಿಯುತ್ತ ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದರು. ಸಿದ್ದರಾಮಯ್ಯ ಊಟ ಮಾಡುವಾಗ ಮನೆ ಹೊರಗೆ ಕುಳಿತ ಗ್ರಾಮದ ಮಹಿಳೆಯರು ಸೋಬಾನೆ ಪದ ಹಾಡಿದರು. ಸೋಬಾನೆ ಹಾಡಿದ ಮಹಿಳೆಯರಿಗೆ ಸಿದ್ದರಾಮಯ್ಯ 1500 ರೂಪಾಯಿ ನೀಡಿದರು.
'ನಾನು ಮೊದಲು ದಿನಕ್ಕೆ ಮೂರು ಹೊತ್ತೂ ನಾನ್ವೆಜ್ ತಿನ್ನುತ್ತಿದ್ದೆ. ಈಗ ಕಡಿಮೆ ಮಾಡಿದ್ದೇನೆ. ಭಾನುವಾರ, ಬುಧವಾರ, ಶುಕ್ರವಾರ ನಾನ್ವೆಜ್ ತಿನ್ನುವೆ' ಎಂದು ಸಿದ್ದರಾಮಯ್ಯ ಹೇಳಿದರು.
'ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದೆ. ಸ್ನೇಹಿತ ಮಹೇಶ್ ಫಾರಿನ್ನಿಂದ ಎರಡು ಬಂಡಲ್ ಸಿಗರೇಟು ತಂದು ಕೊಟ್ಟಿದ್ದ. ಕೂತ್ಕೊಂಡು ಎಲ್ಲ ಸೇದ್ಬಿಟ್ಟೆ. ಒಂದು ದಿನ ಟ್ರಿಪ್ ಹೋದಾಗ ಕೂತ್ಕೊಂಡು ಯೋಚನೆ ಮಾಡ್ದೆ. ನಾನು ಇಷ್ಟೊಂದು ಸಿಗರೇಟ್ ಸೇದುತ್ತೀನಿ ಏನಾಗ್ಬೇಡ ಅಂತ. ಬಳಿಕ ಒಂದು ವಾರ ಟ್ರಿಪ್ಗೆ ಹೋಗಿ ಬರುವಷ್ಟರಲ್ಲಿ ಸಂಪೂರ್ಣ ಸಿಗರೇಟ್ ಬಿಟ್ಬಿಟ್ಟೆ' ಎಂದರು.
0 التعليقات: