Monday, 28 December 2020

ಬಿಜಿಯಾಗಿದ್ದ ರಸ್ತೆಯಲ್ಲಿ ಹೊಡೆದು ಕೊಂದರೂ ಸಹಾಯಕ್ಕೆ ಬಾರದ ಜನ


 ಬಿಜಿಯಾಗಿದ್ದ ರಸ್ತೆಯಲ್ಲಿ ಹೊಡೆದು ಕೊಂದರೂ ಸಹಾಯಕ್ಕೆ ಬಾರದ ಜನ

ಬಿಜಿಯಾಗಿದ್ದ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ಅಮಾನುಷವಾಗಿ ಕೋಲುಗಳಿಂದ ಹೊಡೆದು ಕೊಲ್ಲುತ್ತಿದ್ದರೂ ಅಲ್ಲಿದ್ದ ಯಾರು ಸಹ ನೆರವಿಗೆ ಬಾರದ ಘಟನೆಯೊಂದು ದೆಹಲಿ ಸಮೀಪದ ಗಜಿಯಾಬಾದ್ ನಲ್ಲಿ ನಡೆದಿದೆ.

ಈ ಹತ್ಯೆಯ ವಿಡಿಯೋ ವೈರಲ್ ಆಗಿದ್ದು, ರಸ್ತೆಯಲ್ಲಿ ಕಾರು, ಮೋಟರ್ ಸೈಕಲ್, ಇತರೆ ವಾಹನ ಹಾದು ಹೋಗುತ್ತಿದೆ ಈ ನಡುವೆಯೇ ಇಬ್ಬರು ಕೋಲುಗಳಿಂದ ಒಬ್ಬ ವ್ಯಕ್ತಿಯನ್ನು ಬಡಿಯುವುದು ಕಾಣಿಸುತ್ತದೆ. ಆದರೆ ಯಾರು ತಡೆಯುವುದಿಲ್ಲ ಮತ್ತು ಬಳಿಕ ಆಸ್ಪತ್ರೆಗೆ ಕರೆದೊಯ್ಯುವುದಿಲ್ಲ.

ಹೂವಿನ ಅಂಗಡಿ ಸ್ಥಾಪನೆ ವಿಚಾರದಲ್ಲಿ ವಿವಾದವಿತ್ತು. ಮೃತ ಅಜಯ್ ಸಹೋದರ ಸಂಜಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದರೆ ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದರು.

ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


SHARE THIS

Author:

0 التعليقات: