ಅನುಕಂಪದ ಆಧಾರದಲ್ಲಿ ವಿವಾಹಿತ ಮಗಳಿಗೂ ಉದ್ಯೋಗದ ಅವಕಾಶ : ಹೈಕೋರ್ಟ್ ನಿಂದ ಮಹತ್ವದ ಆದೇಶ
ಬೆಂಗಳೂರು : ವಿವಾಹಿತ ಮಗಳಿಗೂ ಅನುಕಂಪದ ಆಧಾರದ ಉದ್ಯೋಗದ ಅವಕಾಶವನ್ನು ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠ ತೀರ್ಪು ಕೊಟ್ಟಿದೆ.
ಇದುವರೆಗೂ ಪತ್ನಿ ಹಾಗೂ ಪುತ್ರ ಅವಿವಾಹಿತ ಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ವಿವಾಹಿತ ಮಗಳಿಗೂ ಅನುಕಂಪದ ಆಧಾರದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಇದು ತಾರತಮ್ಯದ ಕಾನೂನು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭುವನೇಶ್ವರಿ ಪುರಾಣಿಕೆ ಅವರ ರಿಟ್ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಹೈಕೋರ್ಟ್ ವಿವಾಹಿತ ಪುತ್ರಿಗೂ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಸಂಬಂಧ ಮಹತ್ವದ ತೀರ್ಪು ಕೊಟ್ಟಿದೆ.
ಮೃತ ಸರ್ಕಾರಿ ನೌಕರನ ಅವಲಂಬಿತ ಕುಟುಂಬ ಸದಸ್ಯನನ್ನು ಅನುಕಂಪದ ಆಧಾರದ ಮೇಲೆ ನೇಮಕ ಮಾಡಲು ಪರಿಗಣಿಸಲಾಗುತ್ತದೆ. ಅವಲಂಬಿತ ಕುಟುಂಬ ಸದಸ್ಯ ಮರಣ ಹೊಂದಿದಾಗ ಒಬ್ಬ ಪತ್ನಿ, ಪುತ್ರ, ಅವಿವಾಹಿತ ಮಗಳು, ಮತ್ತು ಅವಿವಾಹಿತ ಸಹೋದರ ಅಥವಾ ಸಹೋದರಿಗೆ ಅನುಕಾಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿತ್ತು. ಹೀಗಾಗಿ ಇದು ತಾರತಮ್ಯದ ಕಾನೂನು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
0 التعليقات: