ಬೋನಿಟ್ಟು ಕಾದು ಕುಳಿತಿರುವ ಅರಣ್ಯ ಇಲಾಖೆ; ಬಲೆಗೆ ಬೀಳದೆ ಕಾಫಿನಾಡಿನ ಜನರಲ್ಲಿ ಭೀತಿ ಮೂಡಿಸುತ್ತಿರುವ ಚಿರತೆ
ಚಿಕ್ಕಮಗಳೂರು (ಡಿ.16): ಕಾಫಿನಾಡಿನ ಬಯಲಿ ಸೀಮೆಯ ಜನರಲ್ಲಿ ಚಿರತೆಯೊಂದು ಭಯ ಮೂಡಿಸಿದೆ. ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಚಿರತೆಯೊಂದು ಓಡಾಡುತ್ತಿದ್ದು, ಇದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.ಕಾಟಿಗನೆರೆ ಗ್ರಾಮದ ಶಿವಪ್ರಸಾದ್ ಎಂಬುವರ ಗೊಬ್ಬರ ತಯಾರಿಕ ಘಟಕಕ್ಕೆ ಪ್ರತಿನಿತ್ಯ ಚಿರತೆ ಬರುತ್ತಿದ್ದು, ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಚಿರತೆ ಮೊದಲ ದಿನ ಬಂದಾಗ ಫ್ಯಾಕ್ಟರಿಯಲ್ಲಿದ್ದ ನಾಯಿಮರಿಯನ್ನ ಎತ್ತಿಕೊಂಡು ಹೋಗಿದೆ. ಇದರ ರುಚಿಗೆ ಪ್ರತಿದಿ ತಪ್ಪದೇ ಫ್ಯಾಕ್ಟರಿಗೆ ಆಗಮಿಸುತ್ತಿದೆ. ಮಧ್ಯರಾತ್ರಿ 1.30 ರಿಂದ 2 ಗಂಟೆ ವೇಳೆಯಲ್ಲಿ ಚಿರತೆ ಆಗಮಿಸುತ್ತಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇದೇ ಹಿನ್ನಲೆ ಈ ಚಿರತೆಯನ್ನು ಸೆರೆ ಹಿಡಿಯುವಂತೆ ಇಲ್ಲಿನ ಜನರು ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳಿ ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟಿದ್ದು, 15 ದಿನವಾದರೂ ಚಿರತೆ ಮಾತ್ರ ಈ ಬೋನಿಗೆ ಬಿದ್ದಿಲ್ಲ .
ಸಿಸಿಟಿವಿಯಲ್ಲಿ ಚಿರತೆ ಚಲನವಲನ ದಾಖಲಾಗಿದ್ದು, ಪ್ರತಿನಿತ್ಯ ಫ್ಯಾಕ್ಟರಿಗೆ ಬರುತ್ತಿರುವ ಚಿರತೆ ಬೋನ್ ಹತ್ತಿರ ಬಂದು ಹುಷಾರಾಗಿ ಒಂದು ಹೆಜ್ಜೆ ಕೂಡ ಒಳಗೆ ಕಾಲಿಡದೇ ವಾಪ್ಪಸ್ಸಾಗಿದೆ. ಚಿರತೆ ಬೋನ್ ಒಳಗೆ ಬಿದ್ದಿಲ್ಲ ಎಂದು ಬೋನ್ ನ ಜಾಗ ಬದಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಲೆನೋವು ತರಿಸಿದರೆ, ಸ್ಥಳೀಯರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ. ಕೇವಲ ಕಾಟಿಗನೆರೆ ಗ್ರಾಮದಲ್ಲಿ ಮಾತ್ರ ವಲ್ಲದೇ ಸುತ್ತಮುತ್ತದ ಗ್ರಾಮಗಳಾದ ಅಬ್ಬಿನ ಹೊಳಲು , ಮುಗುಳಿ, ತಮಟದಹಳ್ಳಿ ಜನರು ಚಿರತೆ ಭಯದಿಂದ ಬದುಕುವಂತೆ ಆಗಿದೆ. ಎಲ್ಲಿ ಯಾವಾಗ ಚಿರತೆ ಬರುತ್ತದೆ ಎಂಬ ಭೀತಿ ಕಾಡುತ್ತಿದೆ. ಅಷ್ಟೇ ಅಲ್ಲದೇ ಇಲ್ಲಿನ ಹಲವರಿಗೆ ಚಿರತೆ ಸಂಚಾರ ಮಾಡುವುದು ಕಾಣಿಸಿಕೊಂಡಿದೆ. ಈಗಾಗಲೇ ಅನೇಕ ಕುರಿ, ಕರುವನ್ನ ಕೂಡ ಬಲಿತೆಗೆದುಕೊಂಡಿದೆ. ಅಡಿಕೆ, ತೆಂಗು ತೋಟ ಅಂತ ರಾತ್ರಿಯಿಡೀ ಓಡಾಡುತ್ತಿದ್ದ ರೈತರು ಇದೀಗ ಚಿರತೆಯ ಓಡಾಟದಿಂದ ಕಂಗಲಾಗಿ ಹೋಗಿದ್ದಾರೆ. ಹಸು, ಕುರಿ, ನಾಯಿಯನ್ನ ಬಲಿ ತೆಗೆದುಕೊಂಡಿರುವ ಚಿರತೆ ಜನರ ಮೇಲೆ ದಾಳಿ ಮಾಡುವ ಮೊದಲು ಹೇಗಾದರೂ ಮಾಡಿ ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
0 التعليقات: