ಸಿಲಿಕಾನ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆ : ನಾಯಿ ತೊಳೆಯಲು ಕಲ್ಲು ಕ್ವಾರಿಗಿಳಿದ ಅಣ್ಣ-ತಂಗಿಯ ದಾರುಣ ಸಾವು
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದ್ದು, ನಾಯಿ ತೊಳೆಯಲು ಕಲ್ಲು ಕ್ವಾರಿಗಿಳಿದ ಅಣ್ಣ ತಂಗಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ಬೆಟ್ಟ ಹಲಸೂರಿನ ಬಳಿ ನಡೆದಿದೆ.
ಮೃತರನ್ನು ಜೆನ್ನಿಫರ್ (17) ಪ್ರೇಮ್ ಕುಮಾರ್ (21) ಎಂದು ಗುರುತಿಸಲಾಗಿದೆ. ಅಣ್ಣ ತಂಗಿ ಇಬ್ಬರು ನಾಯಿ ತೊಳೆಯಲು ಕಲ್ಲು ಕ್ವಾರಿಗಿಳಿದಿದ್ದಾರೆ, ಈ ವೇಳೆ ಆಯತಪ್ಪಿ ಜೆನ್ನಿಫರ್ ನೀರಿನಲ್ಲಿ ಮುಳುಗಿದ್ದಾರೆ. ಈ ಸಂದರ್ಭದಲ್ಲಿ ತಂಗಿಯನ್ನು ಕಾಪಾಡಲು ಹೋದ ಅಣ್ಣ ಪ್ರೇಮ್ ಕುಮಾರ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 التعليقات: