ಕೊರೊನಾ ಬೆನ್ನಲ್ಲೇ ಕೇರಳಕ್ಕೆ `ಶಿಗೆಲ್ಲಾ' ವೈರಸ್ ಎಂಟ್ರಿ : ಹೈ ಅಲರ್ಟ್
ತಿರುವನಂತಪುರ : ಕೊರೊನಾ ವೈರಸ್ ಬೆನ್ನಲ್ಲೇ ಕೇರಳಕ್ಕೆ ಮತ್ತೊಂದು ವೈರಸ್ ವಕ್ಕರಿಸಿದ್ದು, ಕೇರಳದ 11 ವರ್ಷದ ಬಾಲಕನಿಗೆ ಶಿಗೆಲ್ಲಾ ಎಂಬ ಸೋಂಕಿನಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಬಾಲಕ ಸಾವನ್ನಪ್ಪಿದ 2 ದಿನಗಳ ಬಳಿಕ ಕೋಜಿಕೋಡ್ ಜಿಲ್ಲೆಯ 20 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ಈ ವಿಚಾರವಾಗಿ ತನಿಖೆ ಮಾಡಲು ಆರೋಗ್ಯ ಸಚಿವೆ ಶೈಲಜಾ ಸೂಚಿಸಿದ್ದು, ಪ್ರದೇಶದ ಸುತ್ತಮುತ್ತ ಹೆಲ್ತ್ ಕ್ಯಾಂಪ್ ಗಳನ್ನು ಹಾಕಲಾಗಿದೆ. ನೀರು ಅಥವಾ ಆಹಾರದಿಂದ ಈ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶಿಗೆಲ್ಲಾ ಸೋಂಕಿನ ಲಕ್ಷಣಗಳು
ಅತಿಸಾರ, ಜ್ವರ, ಹೊಟ್ಟೆ ಸೆಳೆತ, ಏಳು ದಿನಗಳ ವರೆಗೆ ಕಾಡುವ ರೋಗಲಕ್ಷಣ. ಸಾಮಾನ್ಯವಾಗಿ ಪ್ರತಿಜೀವಕಗಳ ಮೂಲಕ ಚಿಕಿತ್ಸೆ ಯನ್ನು ಮಾಡಲಾಗುತ್ತದೆ, ಇದು ಕಾಯಿಲೆಯ ಅವಧಿಯನ್ನು ಕಡಿಮೆ ಮಾಡಬಹುದು.
ಶಿಗೆಲ್ಲಾ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬವ್ಯಕ್ತಿಗೆ ವಿವಿಧ ಮಾರ್ಗಗಳ ಮೂಲಕ ಹರಡುತ್ತದೆ- ಸೋಂಕಿತ ವ್ಯಕ್ತಿಯು ಅತಿಸಾರದಿಂದ ಗುಣಮುಖಗೊಂಡ ನಂತರವೂ.ಯಾರಿಗಾದರೂ ರೋಗವನ್ನು ಉಂಟುಮಾಡಲು ಸ್ವಲ್ಪ ಸಂಖ್ಯೆಯ ಬ್ಯಾಕ್ಟೀರಿಯಾಗಳು ಬೇಕಾಗುತ್ತದೆ.
ಕಲುಷಿತ ಆಹಾರ, ನೀರು ಈ ಸೋಂಕಿನ ಮೂಲ.
ಬ್ಯಾಕ್ಟೀರಿಯಾದ ಇರುವಿಕೆಯನ್ನು ಸಾಮಾನ್ಯವಾಗಿ ಮಲಪರೀಕ್ಷೆಯಿಂದ ದೃಢೀಕರಿಸಲಾಗುತ್ತದೆ.
5. ಎಲ್ಲಾ ವಯಸ್ಸಿನ ಜನರು ಸೋಂಕಿಗೆ ಒಳಗಾಗಬಹುದಾದರೂ, ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಕೇರಳದಲ್ಲಿಯೂ ಈ ಸೋಂಕು ತಗುಲಿರುವವರು ಹೆಚ್ಚಾಗಿ ಮಕ್ಕಳೇ. ಪ್ರಯಾಣ ಮಾಡುವ ವರು ಪ್ರಯಾಣಮಾಡುವಾಗ ಕಲುಷಿತ ನೀರು ಬರುವ ಸಾಧ್ಯತೆ ಇರುವುದರಿಂದ ಈ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕವು ಸಹ ಈ ರೋಗಕ್ಕೆ ಕಾರಣವಾಗಬಹುದು.
0 التعليقات: