Saturday, 19 December 2020

ನವವಿವಾಹಿತ ಯುವತಿ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ


ನವವಿವಾಹಿತ ಯುವತಿ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ


ಲೂಧಿಯಾನ: ನವ ವಿವಾಹಿತ ಮಹಿಳೆ ಮೇಲೆ ಐವರು ಕಾಮುಕರು ಅತ್ಯಾಚಾರ ಮಾಡಿ ಎಸೆದು ಹೋಗಿರುವ ಘಟನೆ ಲೂಧಿಯಾನ ನಗರ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ ಎಂಬಿಡಿ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ಮೆಹಂದಿ ಹಚ್ಚಲು ಯುವತಿಯನ್ನು ಆಹ್ವಾನಿಸಿದ್ದಾರೆ. ಮಾಲ್‌ಗೆ ಬರುತ್ತಿದ್ದಂತೆ ಈಕೆಯನ್ನು ಐವರು ಕಾಮುಕರು ಮಂಡಿಯಾನಿ ಎಂಬ ಹಳ್ಳಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ವೆಸಗಿದ ಬಳಿಕ ಗ್ರ್ಯಾಂಡ್‌ ವಾಲ್‌ ಮಾಲ್‌ ಬಳಿ ಎಸೆದು ಹೋಗಿದ್ದಾರೆ. ಬಳಿಕ ಯುವತಿ ತನ್ನ ಪತಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾಳೆ. ಸದ್ಯ ಸಂತ್ರಸ್ತೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ತನಿಖಿಧಿಕಾರಿ ಗುರ್ಬಾನ್ಸ್‌ ಸಿಂಗ್‌, ಆರೋಪಿಗಳನ್ನ ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ. ಸಂತ್ರಸ್ತ ಕೆಲ ದಿನಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
SHARE THIS

Author:

0 التعليقات: