Monday, 14 December 2020

ಹೊಸ ಕೃಷಿ ಕಾನೂನುಗಳು 'ರೈತ ವಿರೋಧಿ', ಬಂಡವಾಳಶಾಹಿಗಳಿಗೆ ಲಾಭವಾಗುತ್ತದೆ: ಅರವಿಂದ್ ಕೇಜ್ರಿವಾಲ್


ಹೊಸ ಕೃಷಿ ಕಾನೂನುಗಳು 'ರೈತ ವಿರೋಧಿ', ಬಂಡವಾಳಶಾಹಿಗಳಿಗೆ ಲಾಭವಾಗುತ್ತದೆ: ಅರವಿಂದ್ ಕೇಜ್ರಿವಾಲ್

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳು 'ರೈತ ವಿರೋಧಿ'ಯಾಗಿದ್ದು, ಅಪಾರ ಪ್ರಮಾಣದ ಹಣದುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಬಂಡವಾಳಶಾಹಿಗಳಿಗೆ ಲಾಭವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಪ್ರತಿಭಟನಾ ನಿರತ ರೈತರಿಗೆ ಬೆಂಬಲವಾಗಿ ಇಂದು ಎಎಪಿ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಯಲ್ಲಿ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ ದೆಹಲಿ ಸಿಎಂ, ಹೊಸ ಕೃಷಿ ಕಾನೂನುಗಳು ಹಣದುಬ್ಬರಕ್ಕೆ ಪರವಾನಗಿ ನೀಡುತ್ತವೆ ಎಂದರು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಜನರು ಬಯಸಿದಷ್ಟು ಸಂಗ್ರಹಿಸಬಹುದು ಎಂದು ಈ ಕಾನೂನು ಹೇಳುತ್ತದೆ. ಹೀಗಾಗಿ ರೈತರ ವಿಷಯದ ಬಗ್ಗೆ ಕೊಳಕು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ನಾನು ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಈ ಕಾನೂನುಗಳು ರೈತ ವಿರೋಧಿ ಮತ್ತು ಜನ ಸಾಮಾನ್ಯರ ವಿರೋಧಿಯಾಗಿವೆ. ಇದರಿಂದ ಕೆಲವು ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಈ ಕಾನೂನುಗಳಿಂದ ಅಪಾರ ಹಣದುಬ್ಬರಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು.

ಈ ಕಾನೂನುಗಳಿಂದಾಗಿ, ಮುಂದಿನ ವರ್ಷಗಳಲ್ಲಿ ಗೋಧಿ ಬೆಲೆ ನಾಲ್ಕು ಪಟ್ಟು ಹೆಚ್ಚು ದುಬಾರಿಯಾಗಲಿದೆ ಎಂದು ದೆಹಲಿ ಸಿಎಂ ಹೇಳಿದರು.SHARE THIS

Author:

0 التعليقات: