ರಾಜ್ಯದಲ್ಲಿ 'ಶಾಲಾ-ಕಾಲೇಜು ಆರಂಭ'ದ ಹೊಸ್ತಿಲಲ್ಲಿರುವ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆ ಬಿಸಿ
ಬೆಂಗಳೂರು : ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಜನವರಿ 1ರ ಹೊಸ ವರ್ಷದಿಂದ ಬೋರ್ಡ್ ಪರೀಕ್ಷೆಗಳನ್ನು ಒಳಗೊಂಡಂತ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕೆ ನಿರ್ಧಾರ ಕೈಗೊಂಡಿದೆ. ಇಂತಹ ಶಾಲಾ-ಕಾಲೇಜು ಆರಂಭದ ಹೊಸ್ತಿಲಲ್ಲಿ ಇರುವಂತ ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆ ಬಿಸಿ ಮುಟ್ಟಿದೆ. ಶಾಲಾ-ಕಾಲೇಜು ಶುಲ್ಕಕ್ಕೆ ವಿನಾಯಿತಿ ನೀಡುವಂತೆ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ನಗರದಲ್ಲಿ ಖಾಸಗಿ ಶಾಲೆಗಳ ಫೀಸ್ ಟಾರ್ಚರ್ ವಿರುದ್ಧ ಸಿಡಿದೆದ್ದು ಬೀದಿಗೆ ಇಳಿದಿರುವಂತ ವಿದ್ಯಾರ್ಥಿಗಳ ಪೋಷಕರು, ಖಾಸಗೀ ಶಾಲೆಗಳ ಶಾಲಾ ಶುಲ್ಕದಲ್ಲಿ ವಿನಾಯ್ತಿ ನೀಡಲು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಮೂಲಕ ಫೀಸ್ ಟಾರ್ಚರ್ ವಿರುದ್ಧ ಪೋಷಕರು ಸಮರವನ್ನೇ ಸಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಾಯ್ಸ್ ಆಫ್ ಪೇರೆಂಟ್ಸ್ ಕರ್ನಾಟಕ ಅಸೋಸಿಯೇಷನ್ ನಿಂದ ಕರೆ ನೀಡಿರುವಂತ ಪ್ರತಿಭಟನೆಯಲ್ಲಿ ಭಾಗವಹಿಸಿರುವಂತ ಅನೇಕ ಪೋಷಕರು, ನೀವು ತೋರಿಸಿ ಶಾಲಾ ಖರ್ಚಿನ ಲೆಕ್ಕ, ನಾವು ಪಾವತಿಸುತ್ತೇವೆ ಸರಿಯಾದ ಶುಲ್ಕ, ಏರಿಸಬೇಡಿ ಏನೂ ಅಧಿಕ ಎಂಬುದಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಿಂದಿನ ಶೈಕ್ಷಣಿಕ ಸ್ಥಿತಿ ಇಂದಿಲ್ಲ. ಹಿಂದಿನ ಶೈಕ್ಷಣಿಕ ಶುಲ್ಕ ಇಂದೇಕೆ.? ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು. ಖಾಸಗೀ ಶಾಲೆಗಳ ಅಧಿಕ ಶುಲ್ಕದ ಹೊರೆಗೆ ಬ್ರೇಕ್ ಹಾಕಬೇಕು ಎಂಬುದಾಗಿ ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾ, ಸರ್ಕಾರವನ್ನು ಆಗ್ರಹಿಸಿದ್ದಾರೆ.
0 التعليقات: