ಸಮಸ್ತ: ಕಾಸರಗೋಡು ಜಿಲ್ಲೆಗೆ ನವ ಸಾರಥಿಗಳು
ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾಸರಗೋಡು ಜಿಲ್ಲಾ ಕಮಿಟಿಗೆ ಹೊಸ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ದೇಳಿ ಸಅದಿಯ್ಯಾ ಕಾನ್ಪರೆನ್ಸ್ ಹಾಲಲ್ಲಿ ನಡೆದ ಸಭೆಯಲ್ಲಿ ಬರುವ ಮೂರು ವರ್ಷಕ್ಕಿರುವ ಸಾರಥಿಗಳನ್ನು ಘೋಷಿಸಲಾಯಿತು. 10 ಗಂಟೆಗೆ ನಡೆದ ನೂರುಲ್ ಉಲಮ ಮಕ್ಬರ ಝಿಯಾರತಿಗೆ ಎಸ್ ವೈ ಎಸ್ ಜಿಲ್ಲಾ ಪ್ರೆಸಿಡೆಂಟ್ ಸಯ್ಯಿದ್ ಪಿ.ಎಸ್ ಆಟಕೋಯ ತಂಙಳ್ ಪಂಜಿಕ್ಕಲ್ ನೇತೃತ್ವ ವಹಿಸಿದ್ದರು.
ಮಾಣಿಕೊತ್ ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಮುಶಾವರಾಂಗ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಅಂಗ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಪುನರ್ ಸಂಘಟನೆಗೆ ನೇತೃತ್ವ ಕೊಟ್ಟರು. ಕೆ.ಪಿ ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ತೃಕರಿಪ್ಪೂರ್ ಮುಹಮ್ಮದ್ ಅಲಿ ಸಖಾಫಿ ಮುಂತಾದವರು ವಿಷಯ ಮಂಡನೆ ಮತ್ತು ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ ಉಸ್ತಾದ್ ವರದಿ ಮಂಡನೆ ಮಾಡಿದರು.
ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಮೂಸಲ್ ಮದನಿ ತಲಕ್ಕಿ, ಇಬ್ರಾಹಿಮ್ ದಾರಿಮಿ ಗುಣಾಜೆ, ಎಂ.ಪಿ ಅಬ್ದುಲ್ಲಾ ಫೈಝಿ ನೆಕ್ರಾಜೆ. ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಸ್ವಾಗತ ಮತ್ತು ಮೊಯ್ದು ಸಅದಿ ಚೇರೂರ್ ಕೃತಜ್ಞತೆ ಸಲ್ಲಿಸಿದರು.
ನವ ಸಾರಥಿಗಳು:
ಅಧ್ಯಕ್ಷರು: ತಾಜುಶ್ಶರೀಅ ಅಲಿ ಕುಞ್ಞಿ ಉಸ್ತಾದ್ ಶಿರಿಯ,
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಅಲಿ ಸಖಾಫಿ ತೃಕರಿಪ್ಪೂರ್.
ಕೋಶಾಧಿಕಾರಿ: ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೊತ್.
ಉಪಾಧ್ಯಕ್ಷರು: ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್, ಸಯ್ಯಿದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ, ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಅಶ್ರಫ್ ಅಸ್ಸಖಾಫ್ ಮಞ್ಞಂಪಾರ, ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್.
ಕಾರ್ಯದರ್ಶಿಗಳು: ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಮೊಯ್ದು ಸಅದಿ ಚೇರೂರ್, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ.
0 التعليقات: