Monday, 14 December 2020

ರಾಜಸ್ಥಾನದ ನಗರಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ | ಮೂರನೇ ಸ್ಥಾನಕ್ಕಿಳಿದ ಬಿಜೆಪಿಗೆ ಮುಖಭಂಗ


ರಾಜಸ್ಥಾನದ ನಗರಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ | ಮೂರನೇ ಸ್ಥಾನಕ್ಕಿಳಿದ ಬಿಜೆಪಿಗೆ ಮುಖಭಂಗ

ಜೈಪುರ : ರಾಜಸ್ಥಾನ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಬಿಜೆಪಿಗೆ ಈಗ ನಗರಾಡಳಿತ ಚುನಾವಣೆಯಲ್ಲಿ ತೀವ್ರ ಮುಖಭಂಗವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿದ್ದರೆ, ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.

12 ಜಿಲ್ಲೆಗಳ 50 ನಗರ ಸಂಸ್ಥೆಗಳ 1,775 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ 619ರಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. 596 ಸ್ಥಾನಗಳನ್ನು ಗೆದ್ದಿರುವ ಪಕ್ಷೇತರರು ಎರಡನೇ ಸ್ಥಾನದಲ್ಲಿದ್ದು, 548 ವಾರ್ಡ್ ಗಳಲ್ಲಿ ಗೆದ್ದಿರುವ ಬಿಜೆಪಿ ಮೂರನೇ ಸ್ಥಾನದಲ್ಲಿದೆ.SHARE THIS

Author:

0 التعليقات: