Monday, 28 December 2020

ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದ ವಿರಾಟ್ ಕೊಹ್ಲಿ


ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದ ವಿರಾಟ್ ಕೊಹ್ಲಿ

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿ ಬಿಡುಗಡೆ ಮಾಡಿರುವ ದಶಕದ ಏಕದಿನ ಮತ್ತು ಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 50 ಓವರ್​ಗಳಲ್ಲಿ ಭಾರತ ತಂಡದ ಪರ ಅವರು ಮಾಡಿರು ಸಾಧನೆ ಪರಿಗಣಿಸಿ ಐಸಿಸಿ, ಕೊಹ್ಲಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರನ್​ ಮಷಿನ್​ ಎಂದು ಕರೆಸಿಕೊಳ್ಳುವ ವಿರಾಟ್​​ ಕೊಹ್ಲಿ ಈ ದಶಕದಲ್ಲಿ 10,000 ರನ್​ ಸಿಡಿಸಿರುವ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಅವರು 2010-20ರ ಅವಧಿಯಲ್ಲಿ 39 ಶತಕ ಹಾಗೂ 48 ಅರ್ಧಶತಕ ಸಿಡಿಸಿದ್ದಾರೆ. ಇವರು 61.83 ಸರಾಸರಿಯೊಂದಿಗೆ ರನ್ ​ಗಳಿಸಿದ್ದು, 112 ಕ್ಯಾಚ್​ ಕೂಡ ಪಡೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್​ ಕೊಹ್ಲಿ, ನನ್ನ ಒಂದೇ ಒಂದು ಉದ್ದೇಶವೆಂದರೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದನ್ನೇ ಪ್ರತೀ ಪಂದ್ಯದಲ್ಲೂ ಮಾಡಲು ಬಯಸುತ್ತೇನೆ. ಆದರೆ ಅಂಕಿ-ಅಂಶಗಳು ಕೇವಲ ಉಪ ಉತ್ಪನ್ನವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಇನ್ನು ಕೊಹ್ಲಿ 2010ರ ಅವಧಿಯಲ್ಲಿ 2011ರ ಏಕದಿನ ವಿಶ್ವಕಪ್​, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಗೆದ್ದ ತಂಡದ ಭಾಗವಾಗಿದ್ದಾರೆ. ಜೊತೆಗೆ 73 ಅಂತಾರಾಷ್ಟ್ರೀಯ ಶತಕ 108 ಅರ್ಧಶತಕ ಸಿಡಿಸಿರುವ ಕೊಹ್ಲಿ, ಐಸಿಸಿ ದಶಕದ ಕ್ರಿಕೆಟರ್​ಗೆ ನೀಡುವ 'ಸರ್​ ಗ್ಯಾರಿ ಸೋಬರ್ಸ್​ ಅವಾರ್ಡ್​' ಕೂಡ ಪಡೆದಿದ್ದಾರೆ.


SHARE THIS

Author:

0 التعليقات: