Friday, 11 December 2020

ಮೈಸೂರು: ಮಾಜಿ ಸಿಎಂ ಎಚ್‌ಡಿಕೆ ಪರ ಪ್ರತಾಪ ಸಿಂಹ ಬ್ಯಾಟಿಂಗ್‌!


 ಮೈಸೂರು: ಮಾಜಿ ಸಿಎಂ ಎಚ್‌ಡಿಕೆ ಪರ ಪ್ರತಾಪ ಸಿಂಹ ಬ್ಯಾಟಿಂಗ್‌!

ಮೈಸೂರು, ಡಿಸೆಂಬರ್ 11: ಬಿಜೆಪಿ ಮಾಡಿರುವ ಒಳ್ಳೆಯ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಬಲಿಸಿದ್ದಾರೆ. ರಾಜಕೀಯ ಕಾರಣಕ್ಕೆ ಅವರನ್ನು ಟೀಕಿಸುವುದು ಸಣ್ಣತನ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಎಚ್‌ಡಿಕೆ ಪರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿ ಭೂ ಸುಧಾರಣಾ ಕಾಯ್ದೆಗೆ ಜಾತ್ಯಾತೀತ ಜನತಾ ದಳ ಪಕ್ಷವು ಬೆಂಬಲ ಸೂಚಿಸಿದ ವಿಚಾರವಾಗಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ ಸಿಂಹ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ರೈತರ ಸಾಲ ಮನ್ನಾದಂತಹ ರೈತ ಪರ ಕಾರ್ಯಕ್ರಮ ನೀಡಿದ್ದಾರೆ, ಅವರೊಬ್ಬ ರೈತನ ಮಗ. ಹೀಗಾಗಿ, ರೈತರು ಹಾಗೂ ಗೋವಿನ ಬಗ್ಗೆ ಅವರಿಗೆ ಗೊತ್ತಿದೆ. ಇದೇ ಕಾರಣಕ್ಕೆ ಅವರು ಬಿಜೆಪಿಯ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಅವರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಎಚ್.ಡಿ ಕುಮಾರಸ್ವಾಮಿಯವರ ನಿಲುವನ್ನು ಬೆಂಬಲಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ 20-20 ಸರ್ಕಾರದಲ್ಲಿಯೂ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಕೃಷಿ ಹಾಗೂ ಗೋವಿನ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಎಚ್‌ಡಿಕೆಯನ್ನು ಹಾಡಿ ಹೊಗಳಿದರು.


SHARE THIS

Author:

0 التعليقات: