ದೇಶದಲ್ಲಿ 'ನವೆಂಬರ್'ನಲ್ಲಿ ಸಂಗ್ರಹವಾದ 'ಜಿಎಸ್ಟಿ ಹಣ' ಎಷ್ಟುಗೊತ್ತಾ.?
ನವದೆಹಲಿ : ಕೊರೋನಾ ಸೋಂಕಿನ ಭೀತಿಯ ನಂತ್ರ ಅನ್ ಲಾಕ್ ಮಾರ್ಗಸೂಚಿಯಂತೆ ದೇಶದಲ್ಲಿ ವ್ಯಾಪಾರ ವಹಿವಾಟು ಕೊಂಚ ಚೇತರಿಗೆ ಕಂಡಿದೆ. ಇದರಿಂದಾಗಿ ನವೆಂಬರ್ ಒಂದೇ ತಿಂಗಳಿನಲ್ಲಿ 1,04,963 ಕೋಟಿ ಜಿಎಸ್ಟಿ ಸಂಗ್ರಹವಾಗಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದ್ದು, ನವೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಒಟ್ಟು 1,04,963 ಕೋಟಿ ಜಿಎಸ್ಟಿ ಹಣ ಸಂಗ್ರಹಿಸಲಾಗಿದೆ. ಇದರಲ್ಲಿ ಸಿಜಿಎಸ್ಟಿ 19,189 ಕೋಟಿ, ಎಸ್ ಜಿಎಸ್ಟಿ 25,540 ಕೋಟಿ ಹಾಗೂ ಐಜಿಎಸ್ಟಿ 51,992 ಸೇರಿದೆ ಎಂಬುದಾಗಿ ತಿಳಿಸಿದೆ.
0 التعليقات: