ಮುಳೂರು, ಮರ್ಕಝ್: 9 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಕಲಿಸಿದ ಉಸ್ತಾದರಿಗೂ ಉಡುಪಿ ಮುಸ್ಲಿಂ ಜಮಾಅತಿನಿಂದ ಸನ್ಮಾನ ಕಾರ್ಯಕ್ರಮ
ಮುಳೂರು,ಮರ್ಕಝ್: ಇತ್ತೀಚೆಗೆ ವಾರ್ತಾ ಮಾಧ್ಯಮಗಳಲ್ಲಿ ಪ್ರಮುಕ ಸುದ್ದಿಯಾದ, ಕೇವಲ 9 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿ ಕೇವಲ 9 ಗಂಟೆಯ ಅವಧಿಯಲ್ಲಿ (ಕುರ್ಆನ್ ನೋಡದೆ ) ಪೂರ್ತಿ ಕುರ್ಆನ್ ಪಠಿಸಿದ 15 ವರ್ಷದ, ಮೂಳೂರಿನ DKSC ಅಧಿನದ ಅಲ್-ಇಹ್ಸಾನ್ ಸುನ್ನೀ ಸೆಂಟರ್ ವಿದ್ಯಾರ್ಥಿ ಮುಹಮ್ಮದ್ ಮುಝ್ಝಮ್ಮಿಲ್ ಬೋಳಿಯಾರ್ ರವರನ್ನು ಹಾಗೂ ತನ್ನ ಗುರು ಹಾಫಿಲ್ ಹಾರಿಸ್ ಸಅದಿ ಉಸ್ತಾದ್ ಕಬಕ ರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್, ಉಡುಪಿ ಜಿಲ್ಲಾ ಸಮಿತಿಯು ಸಂಸ್ಥೆಗೆ ಬೇಟಿ ನೀಡಿ ಸನ್ಮಾನಿಸಿತು.
ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ BSF ರಫೀಕ್ ಗಂಗೊಳ್ಳಿ, ಕಾರ್ಯಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ, ಜಿಲ್ಲಾ ಸದಸ್ಯರಾದ ಅಬ್ದುಲ್ ಹಮೀದ್ ಅದ್ದು ಹಾಗೂ ಶಾಬಾನ್ ಹಂಗ್ಲೂರು ಸುನ್ನೀ ಸೆಂಟರಿಗೆ ಬೇಟಿ ನೀಡಿ ಹಾಫಿಲ್ ಮುಝಮ್ಮಿಲ್ ಹಾಗೂ ಈ ವಿದ್ಯಾರ್ಥಿಗೆ ಕುರ್ಆನ್ ಕಳಿಸಿದ ಉಸ್ತಾದ್ ಹಾಫಿಲ್ ಹಾರಿಸ್ ಸಅದಿ ಉಸ್ತಾದ್ ಕಬಕ ರವರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತಿನ ಉಡುಪಿ ಸಮಿತಿಯ ಜಿಲ್ಲಾಧ್ಯಕ್ಷರಾದ ಜನಾಬ್ BSF ರಫೀಕ್ ಗಂಗೊಳ್ಳಿ ರವರು ಮಾತನಾಡಿ ಇಂತಹ ಪ್ರತಿಭೆಗಳನ್ನು ತಯಾರು ಮಾಡಿ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿರುವ ಅಲ್ ಇಹ್ಸಾನ್ ಸುನ್ನೀ ಸೆಂಟರ್ ವಿದ್ಯಾ ಸಂಸ್ಥೆಯನ್ನು ಅಭಿನಂದಿಸಿದರು ಹಾಗೂ ಮುಝಮ್ಮಿಲ್ ಗೆ ಶುಭಹಾರೈಸಿ ಅವರ ಕುಟುಂಬದ ಆರ್ಥಿಕ ತೊಂದರೆಗಳನ್ನು ನಿವಾರಿಸುವಲ್ಲಿ ಮುಸ್ಲಿಂ ಜಮಾಅತ್ ಆಸರೆಯಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಸಂಸ್ಥೆಯ ಮ್ಯಾನೇಜರ್ UK ಮುಸ್ತಫಾ ಸಅದಿ ಉಸ್ತಾದ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ DKSC ಯ ಕಾರ್ಯಕ್ಷೇತ್ರ ಮತ್ತು ಸೇವೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅಲ್ ಇಹ್ಸಾನ್ ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ, ಎಜು ಪ್ಲಾನೆಟ್ ಪ್ರಿನ್ಸಿಪಾಲ್ ಸ್ವಾಬಿರ್ ಸಅದಿ, ಸಹಾಯಕ ಮ್ಯಾನೇಜರ್ ಸಿದ್ದೀಕ್ ಸಅದಿ, ಹಿಫುಲ್ ಹಾಗು ದಾವಾ ವಿಭಾಗದ ಉಸ್ತಾದರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.
0 التعليقات: