Tuesday, 8 December 2020

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 97.35ಲಕ್ಷಕ್ಕೆ ಏರಿಕೆ..!


 ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 97.35ಲಕ್ಷಕ್ಕೆ ಏರಿಕೆ..!

ನವದೆಹಲಿ,ಡಿ.9-ದೇಶದಲ್ಲಿ ಕೊರೊನಾಪೀಡಿತರ ಸಂಖ್ಯೆ 97.35 ಲಕ್ಷಕ್ಕೆ ಏರಿಕೆಯಾಗಿದೆ. 97 ಲಕ್ಷ ಸೋಂಕಿತರ ಪೈಕಿ ಈಗಾಗಲೇ 92 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶಗಳು ಬಹಿರಂಗಗೊಳಿಸಿದೆ.

ಕಳೆದ 24 ಗಂಟೆಗಳಲ್ಲಿ 32,080 ಮಂದಿ ಸೋಂಕಿಗೆ ಗುರಿಯಾಗಿದ್ದು, 402 ಮಂದಿ ಬಲಿಯಾಗಿದ್ದಾರೆ. ಆದರೂ ಚೇತರಿಕೆ ಪ್ರಮಾಣ ಶೇ.94.66ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 14,98ಕೋಟಿ ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ನಿನ್ನೆ ಒಂದೇ ದಿನ10 ಲಕ್ಷಕ್ಕೂ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.


SHARE THIS

Author:

0 التعليقات: