Saturday, 12 December 2020

8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?


 8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

ಲಖನೌ: ಅವರಿಬ್ಬರು ಎಂಟು ವರ್ಷಗಳ ಕಾಲ ಪ್ರೀತಿಸಿ, ಲಾಕ್​ಡೌನ್​ ಸಮಯದಲ್ಲಿ ಮದುವೆಯಾಗಿದ್ದರು. ಅಪ್ಪ ಅಮ್ಮನ ವಿರೋಧವಿದ್ದರೂ ಮದುವೆಯಾದ ಜೋಡಿಯೊಂದಿಗೆ ಕುಟುಂಬ ಇತ್ತೀಚೆಗೆ ಮಾತನಾಡಲು ಆರಂಭಿಸಿದೆ. ಪ್ರೀತಿ ಒಪ್ಪಿರುವುದಾಗಿ ಹೇಳಿ ಮನೆ ಮಗಳನ್ನು ವಾಪಾಸು ಮನೆಗೆ ಕರೆಸಿಕೊಂಡ ಕುಟುಂಬ ಆಕೆಗೆ ಕೊಟ್ಟಿದ್ದು ಮಾತ್ರ ಯಾರೂ ನಿರೀಕ್ಷಿಸದ ಉಡುಗೊರೆಯನ್ನು.

ಉತ್ತರ ಪ್ರದೇಶದ ಮೈನ್​ಪುರಿ ಜಿಲ್ಲೆಯ ಚಾಂದಿನಿ ಕಶ್ಯಪ್​ (23) ಕಳೆದ ಎಂಟು ವರ್ಷಗಳಿಂದ ಅರ್ಜುನ್​ ಕುಮಾರ್​ (25) ಹೆಸರಿನ ದಲಿತ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ದಲಿತ ಎನ್ನುವ ಕಾರಣಕ್ಕೆ ಚಾಂದಿನಿ ಕುಟುಂಬ ಮದುವೆಗೆ ಒಪ್ಪಿರಲಿಲ್ಲ. ಕುಟುಂಬವನ್ನು ತ್ಯಜಿಸಿ ಬಂದ ಚಾಂದಿನಿ ಜೂನ್​ 12ರಂದು ಅರ್ಜುನ್​ ಜತೆ ದಾಂಪತ್ಯ ಜೀವನ ಆರಂಭಿಸಿದ್ದಾಳೆ. ಉತ್ತರ ಪ್ರದೇಶದಿಂದ ದೆಹಲಿಗೆ ಬಂದ ದಂಪತಿ ಅಲ್ಲೇ ವಾಸ ಹೂಡಿದ್ದಾರೆ.

ಕಳೆದ ನವೆಂಬರ್​ನಲ್ಲಿ ಚಾಂದಿನಿ ಅಣ್ಣಂದಿರು ಆಕೆಯೊಂದಿಗೆ ಮಾತನ್ನಾಡಲು ಆರಂಭಿಸಿದ್ದಾರೆ. ನಾವು ನಿನ್ನ ಪ್ರೀತಿಯನ್ನು ಒಪ್ಪಿದ್ದೇವೆ, ಮನೆಗೆ ಬಾ ಎಂದು ಕರೆದಿದ್ದಾರೆ. ಅದರಂತೆ ನವೆಂಬರ್​ 17ರಂದು ಆಕೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಮೂರು ದಿನಗಳ ನಂತರ ಅಂದರೆ ನವೆಂಬರ್​ 20ರಂದು ಚಾಂದಿನಿ, ಮನೆಯಲ್ಲಿ ತನಗೆ ಹಿಂಸೆ ನೀಡುತ್ತಿರುವುದಾಗಿ ಗಂಡನಿಗೆ ತಿಳಿಸಿದ್ದಾಳೆ. ವಾಪಾಸು ದೆಹಲಿಗೆ ಕಳಿಸುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ಅದಾದ ನಂತರ ಆಕೆಯಿಂದ ಯಾವುದೇ ಕರೆ ಬಂದಿಲ್ಲ. ಈ ವಿಚಾರವಾಗಿ ಅರ್ಜುನ್​ ನವೆಂಬರ್​ 22ರಂದು ಪೊಲೀಸ್​ ದೂರು ದಾಖಲಿಸಿದ್ದಾನೆ.

ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಚಾಂದಿನಿ ಕೊಲೆಯಾಗಿರುವ ವಿಚಾರ ತಿಳಿದುಬಂದಿದೆ. ತಮಗೆ ಇಷ್ಟವಿಲ್ಲದ ಹುಡುಗನನ್ನು ತಂಗಿ ಮದುವೆಯಾದಳು ಎನ್ನುವ ಸಿಟ್ಟಿನಿಂದ ಆಕೆಯ ಅಣ್ಣ ಅವಳನ್ನು ಕೊಲೆ ಮಾಡಿದ್ದಾನೆ. ಕುಟುಂಬದವರ ಸಮ್ಮುಖದಲ್ಲಿ ತಮ್ಮ ಗದ್ದೆಯಲ್ಲೇ ಆಕೆಯ ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಲಾಗಿದೆ. ಇದೀಗ ಚಾಂದಿನಿ ಅಣ್ಣ ಮತ್ತು ಕೊಲೆಗೆ ಸಹಾಯ ಮಾಡಿದ ಮೂವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


SHARE THIS

Author:

0 التعليقات: