Wednesday, 9 December 2020

80 ಸಾವಿರ ಚೇಳು ಸಾಕಿದ ಭೂಪ! ಒಂದು ಗ್ರಾಂ ಚೇಳಿನ ವಿಷಕ್ಕೆ 7.4 ಲಕ್ಷ ರೂಪಾಯಿ!


80 ಸಾವಿರ ಚೇಳು ಸಾಕಿದ ಭೂಪ! ಒಂದು ಗ್ರಾಂ ಚೇಳಿನ ವಿಷಕ್ಕೆ 7.4 ಲಕ್ಷ ರೂಪಾಯಿ!


ಕೈರೋ: ಪ್ರಪಂಚದಲ್ಲಿ ಎಂತೆದ್ದದ್ದೋ ಬಿಸಿನೆಸ್​ಗಳು ಇವೆ. ನಾವು ವಿಷಕಾರಿ ಎಂದು ಸಾಯಿಸುವ ಚೇಳನ್ನೇ ಸಾಕುವ ಬಿಸಿನೆಸ್​ ಇದೆ ಎಂದರೆ ನೀವು ನಂಬಲೇ ಬೇಕು. ಇದೇ ಬಿಸಿನೆಸ್​ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ವ್ಯಕ್ತಿಯೊಬ್ಬ ಇದೀಗ 80 ಸಾವಿರ ಚೇಳನ್ನು ಸಾಕಿ ಕಂಪನಿಯೊಂದನ್ನು ನಡೆಸುತ್ತಿದ್ದಾನೆ.

ಈಜಿಪ್ಟ್​ನ ಮೊಹಮ್ಮದ್ ಹ್ಯಾಮಿ ಬೋಷ್ತಾ ಪುರಾತತ್ವ ಶಾಸ್ತ್ರದಲ್ಲಿ ಪದವಿ ಪಡೆಯುವಾಗ ಚೇಳು ಸಾಕುವ ಯೋಚನೆ ಬಂದಿತಂತೆ. ಪದವಿಯನ್ನು ಅರ್ಧದಲ್ಲೇ ತ್ಯಜಿಸಿ ಈತ ಚೇಳು ಸಾಕಲು ಆರಂಭಿಸಿದ್ದಾನೆ. ಅದಕ್ಕೆಂದೇ ಕೈರೋ ವೆನಮ್ ಹೆಸರಿನ ಸಂಸ್ಥೆ ಸ್ಥಾಪಿಸಿದ್ದಾನೆ. ಈ ಸಂಸ್ಥೆಯ ಮೂಲಕ ದೇಶದ ವಿವಿಧ ಭಾಗದಲ್ಲಿ ಸುಮಾರು 80 ಸಾವಿರ ಚೇಳನ್ನು ಸಾಕಿದ್ದಾನೆ.

ಚೇಳು ಸಾಕುವುದಕ್ಕೆ ಒಂದು ಪ್ರಮುಖ ಕಾರಣವಿದೆ. ಚೇಳಿನ ಬಾಲದ ತುದಿಯಿಂದ ಬರುವ ವಿಷವನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆಯಂತೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆಯಿದೆ. ಯುವಿ ಕಿರಣಗಳನ್ನು ಬಳಸಿ ಚೇಳನ್ನು ಸೆರೆ ಹಿಡಿಯಲಾಗುತ್ತದೆ. ನಂತರ ಅವುಗಳಿಗೆ ಸಣ್ಣ ಪ್ರಮಾಣದ ವಿದ್ಯುತ್​ ನೀಡಿ, ಅವುಗಳಿಂದ ವಿಷವನ್ನು ಸಂಗ್ರಹಿಸಲಾಗುವುದು. ಪ್ರತಿ ಒಂದು ಗ್ರಾಂ ವಿಷಕ್ಕೆ 10 ಸಾವಿರ ಅಮೆರಿಕನ್​ ಡಾಲರ್​ ಅಂದರೆ ಸರಿಸುಮಾರು 7.4 ಲಕ್ಷ ರೂಪಾಯಿ ಬೆಲೆ ಇದೆಯಂತೆ.


SHARE THIS

Author:

0 التعليقات: