ಮಾಜಿ ಸಚಿವ 'ವರ್ತೂರು ಪ್ರಕಾಶ್' 8 ಜನರಿಂದ ಕಿಡ್ನಾಪ್, ನಿರಂತರ ಹಲ್ಲೆ.!
ಬೆಂಗಳೂರು : ಮೂರು ದಿನಗಳ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅವರ ಕೋಲಾರದ ತೋಟದ ಮನೆಯಿಂದ 8 ಜನರ ಗುಂಪೊಂದು ಕಿಡ್ನಾಪ್ ಮಾಡಿ, ಮೂರು ದಿನಗಳವರೆಗೆ ನಿರಂತರವಾಗಿ ಹಲ್ಲೆ ಮಾಡಿದ ಗುಂಪು, ಆನಂತ್ರ ಬಿಡುಗಡೆ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರನ್ನು ಬಿಡುಗಡೆ ಮಾಡೋದಕ್ಕೆ 30 ಕೋಟಿ ರೂಪಾಯಿಗೂ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು 8 ಜನರ ಗುಂಪೊಂದು ಅವರ ಕೋಲಾರದ ತೋಟದ ಮನೆಯಿಂದ ಕಿಡ್ನಾಪ್ ಮಾಡಿದೆ. ಕಾರು ಚಾಲಕನ ಮೇಲೆಯೂ ಹಲ್ಲೆ ಮಾಡಿ, ಕಾರದ ಪುಡಿ ಎರಚಿ ಮಾಜಿ ಸಚಿವರನ್ನು ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪರ್ ಗಳಿಂದ ಕಾರು ಚಾಲಕ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಆದ್ರೇ ಕಿಡ್ನಾಪ್ ಆದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಮಾತ್ರ ನೀಡದಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ.
ಕೊನೆಗೆ ವರ್ತೂರು ಪ್ರಕಾಶ್ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಮಾತನಾಡುತ್ತೇನೆ. ಪ್ರತಿಕ್ರಿಯಿಸುತ್ತೇನೆ ಎಂದಷ್ಟೇ ಹೇಳಿ ಸುದ್ದಿಗಾರರಿಂದ ಹೊರ ನಡೆದಿದ್ದಾರೆ. ಆದ್ರೇ ಅವರನ್ನು ಕಿಡ್ನಾಪ್ ಮಾಡಿದಂತ 8 ಜನರು ಅವರಿಗೆ ನಿರಂತರವಾಗಿ ಮೂರು ದಿನಗಳ ಕಾಲ ಹಲ್ಲೆ ಮಾಡಿದ್ದಲ್ಲದೇ, ಬಿಡುಗಡೆಗಾಗಿ 30 ಕೋಟಿ ಹಣಕ್ಕೂ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೂರು ದಿನಗಳ ನಂತ್ರ ವರ್ತೂರು ಪ್ರಕಾಶ್ ಅವರನ್ನು ಬಿಡುಗಡೆ ಮಾಡಿದ್ದರೂ, ಈ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ. ಹೀಗಾಗಿ ಪ್ರಕರಣ ಕುರಿತಂತೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
0 التعليقات: