Thursday, 17 December 2020

8 ವಾರದ ಪುಟ್ಟ ಕಂದಮ್ಮನಿಗೆ 16 ಕೋಟಿ ರೂ ಬೆಲೆಬಾಳುವ ದುಬಾರಿ ಇಂಜೆಕ್ಷನ್


8 ವಾರದ ಪುಟ್ಟ ಕಂದಮ್ಮನಿಗೆ 16 ಕೋಟಿ ರೂ ಬೆಲೆಬಾಳುವ ದುಬಾರಿ ಇಂಜೆಕ್ಷನ್


ಬ್ರಿಟನ್: ಈ ವಿಷಯವನ್ನು ಯಾರೇ ಕೇಳಿದರು ಒಮ್ಮೆಗೆ ಮೈ ಜುಮ್ ಎನ್ನುತ್ತದೆ. ಆದರೂ ಇದು ಸತ್ಯ. ಏನು ಅರಿಯದ 8 ವಾರದ ಮುಗ್ಧ ಮಗುವಿನ ಜೀವ ಉಳಿಸಲು ವಿಶ್ವದಲ್ಲಿ ಅತಿ ದುಬಾರಿಯಾದ 16 ಕೋಟಿ ರೂ ಬೆಲೆಬಾಳುವ ಇಂಜೆಕ್ಷನ್ ಕೊಡಿಸಲು ಸಿದ್ಧರಾಗಿರುವ ಹೆತ್ತವರ ಪರದಾಟದ ಕಥೆ ಬ್ರಿಟನ್ ನಲ್ಲಿ ನಡೆದಿದೆ.

ಅದೆಂತಹ ಕಾಯಿಲೆ ಇರಬಹುದು ಇಷ್ಟೊಂದು ದುಬಾರಿ ಇಂಜೆಕ್ಷನ್ ಹೇಗೆ ಎನಿಸುವುದು ಸಹಜ. ಆ ಕಾಯಿಲೆಯ ಹೆಸರು ಜೆನೆಟಿಕ್ ಸ್ಪೈನಲ್ ಮಸ್ಕುಲರ್​​ ಆಟ್ರೋಫಿ(SMA). ಇದೊಂದು ಅನುವಂಶೀಯ ಕಾಯಿಲೆ. ದೇಹದಲ್ಲಿ SMN-1 ಜೀನ್​​​ ಕೊರತೆಯಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಸ್ಪೈನಲ್ ಮಸ್ಕುಲರ್​​ ಆಟ್ರೋಫಿ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಈ ಪ್ರೋಟೀನ್​​ನ ಕೊರತೆಯಿಂದಾಗಿ ಎದೆಯ ಭಾಗದ ಸ್ನಾಯುಗಳು ದುರ್ಬಲಗೊಂಡು, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಪುಟ್ಟ ಮಕ್ಕಳಲ್ಲಿ ಕಾಣಿಸುಕೊಳ್ಳುತ್ತದೆ. ಟೈಪ್​​-1 SMA ಕಾಣಿಸಿಕೊಂಡ ಮಗುವಿಗೆ ಕ್ರಮೇಣವಾಗಿ ಸಮಸ್ಯೆ ಉಲ್ಭಣವಾಗಿ ಸ್ನಾಯುಗಳು ಕೆಲಸ ಮಾಡುವುದು ನಿಲ್ಲಿಸುತ್ತವೆ. ಜೊತೆಗೆ ಉಸಿರಾಟದ ಸಮಸ್ಯೆಯಿಂದ ಎರಡು ವರ್ಷ ಒಳಗಾಗಿ ಮಗು ಸಾವನ್ನಪ್ಪುತ್ತದೆ.

ಈ ಕಾಯಿಲೆ ಹೆಚ್ಚಾಗಿ ಬ್ರಿಟನ್ ದೇಶದಲ್ಲಿ ಕಂಡುಬಂದಿದ್ದು ಗಣತಿಯ ಪ್ರಕಾರ ವರ್ಷದಲ್ಲಿ 60 ಮಕ್ಕಳು ಈ ಕಾಯಿಲೆಯಿಂದ ಸಾವನಪ್ಪುತ್ತಿದ್ದಾರೆ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಔಷಧಿಯನ್ನು ಕಂಡುಹಿಡಿಯಲಾಗಿದೆ. ಔಷಧಿಯೇ ಈ ದುಬಾರಿ ಇಂಜೆಕ್ಷನ್. 1.7 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯ ಪ್ರಕಾರ 16 ಕೋಟಿ ರೂ ಬೆಲೆಬಾಳುವ ಈ ಒಂದು ಇಂಜೆಕ್ಷನ್ ಮಗುವಿನ ಪ್ರಾಣವನ್ನು ಕಾಪಾಡಬಹುದು ಎಂದು ಡಾಕ್ಟರ್ಗಳು ಅಭಿಪ್ರಾಯಪಟ್ಟಿದ್ದಾರೆ.



SHARE THIS

Author:

0 التعليقات: