Saturday, 12 December 2020

ಟ್ರಕ್-ಜೀಪ್ ನಡುವೆ ಭೀಕರ ಅಪಘಾತ : 7 ಮಂದಿ ಸ್ಥಳದಲ್ಲೇ ಸಾವು


ಟ್ರಕ್-ಜೀಪ್ ನಡುವೆ ಭೀಕರ ಅಪಘಾತ : 7 ಮಂದಿ ಸ್ಥಳದಲ್ಲೇ ಸಾವು

ಜೈಪುರ : ರಾಜಸ್ಥಾನದ ಚಿತ್ತೊರ್ ಗಢ ಜಿಲ್ಲೆಯಲ್ಲಿ ಶನಿವಾರ ಜೀಪ್ ಮತ್ತು ಟ್ರೇಲರ್ ಟ್ರಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಉದಯ್ ಪುರ-ನಿಂಬೇರಾ ಹೆದ್ದಾರಿಯ ಸಾದುಲ್ಖೇರಾ ಬಳಿ ಈ ಅಪಘಾತ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ' ಎಂದು ಚಿತ್ತೋರ್ ಗಢ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಅಪಘಾತದಲ್ಲಿ ಇತರ 9 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.



SHARE THIS

Author:

0 التعليقات: