Tuesday, 22 December 2020

ವಿಶ್ವದಾದ್ಯಂತ ಕೊರೊನಾ ಅಬ್ಬರ : ಒಂದೇ ದಿನ 5,75,000 ಮಂದಿಗೆ ಸೋಂಕು ದೃಢ


 ವಿಶ್ವದಾದ್ಯಂತ ಕೊರೊನಾ ಅಬ್ಬರ : ಒಂದೇ ದಿನ 5,75,000 ಮಂದಿಗೆ ಸೋಂಕು ದೃಢ

ವಾಷಿಂಗ್ಟನ್ : ವಿಶ್ವಾದ್ಯಂತ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗಿದ್ದು, ಒಂದೇ ದಿನ ಬರೋಬ್ಬರಿ 5,75,000 ಮಂದಿಯಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ವಿಶ್ವದಲ್ಲಿ ಈವರೆಗೆ 75,704,857 ಮಂದಿಗೆ ಕೊರೊನಾ ವೈರಸ್ ಸೋಂಕು ಏರಿಕೆಯಾಗಿದೆ. ಇನ್ನು ವಿಶ್ವದಾದ್ಯಂತ ಈವರೆಗೆ ಕೊರೊನಾ ಮಹಾಮಾರಿಗೆ 1,690,061 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಅಮೆರಿಕಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೆ 326,772 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದು, 18,473,716 ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಅಮೆರಿಕದ ಬಳಿಕ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈವರೆಗೆ 10,075,422 ಮಂದಿ ಸೋಂಕಿಗೊಳಾಗಿದ್ದು, 146,145 ಮಂದಿ ಸಾವನ್ನಪ್ಪಿದ್ದಾರೆ.


SHARE THIS

Author:

0 التعليقات: