ಎಲ್ ಪಿಜಿ ಸಿಲಿಂಡರ್ ದರದಲ್ಲಿ 50 ರುಪಾಯಿ ಏರಿಕೆ; ಯಾವ ನಗರದಲ್ಲಿ ಎಷ್ಟು?
ಕೇಂದ್ರ ಸರ್ಕಾರವು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್ ಪಿಜಿ) ದರವನ್ನು ಮತ್ತೊಮ್ಮೆ ಏರಿಕೆ ಮಾಡಿ, ಘೋಷಣೆ ಮಾಡಿದೆ. ದೇಶೀಯ ಬಳಕೆಯ 14.2 ಕೇಜಿ ತೂಕದ ಎಲ್ ಪಿಜಿ ಸಿಲಿಂಡರ್ ದರವನ್ನು 50 ರುಪಾಯಿ ಹೆಚ್ಚಳ ಮಾಡಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ ಡಿಸೆಂಬರ್ 15ನೇ ತಾರೀಕಿಗೆ ಅನ್ವಯ ಆಗುವಂತೆ, ನಾನ್ ಸಬ್ಸಿಡೈಸ್ಡ್ 14.2 ಕೇಜಿ ತೂಕದ ಸಿಲಿಂಡರ್ ಬೆಲೆ ಬೆಂಗಳೂರು 697 ರು., ದೆಹಲಿ ಹಾಗೂ ಮುಂಬೈನಲ್ಲಿ 694 ರು., ಕೋಲ್ಕತ್ತಾದಲ್ಲಿ 720.50 ರು., ಚೆನ್ನೈನಲ್ಲಿ 710 ರುಪಾಯಿ ಇದೆ. ಬೆಲೆ ಏರಿಕೆ ಮಾಡುವುದಕ್ಕೂ ಮುಂಚೆ ಎಲ್ ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ರು. 594, ಕೋಲ್ಕತ್ತಾ ರು. 620.50, ಮುಂಬೈ ರು. 594, ಚೆನ್ನೈನಲ್ಲಿ ರು. 610 ಇತ್ತು.
ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ತಿಂಗಳು ಎಲ್ ಪಿಜಿ ಸಿಲಿಂಡರ್ ದರದಲ್ಲಿ ಪರಿಷ್ಕರಣೆ ಮಾಡುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹಾಗೂ ಡಾಲರ್ ವಿರುದ್ಧದ ರುಪಾಯಿ ಮೌಲ್ಯದ ಆಧಾರದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿ ಮಾಡಲಾಗುತ್ತದೆ.
ಪ್ರತಿ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ವರ್ಷಕ್ಕೆ 14.2 ಕೇಜಿ ತೂಕದ 12 ಸಿಲಿಂಡರ್ ಗಳು ಭಾರತ ಸರ್ಕಾರದಿಂದ ದೊರೆಯುತ್ತದೆ. ಸಬ್ಸಿಡಿಯು ಬಳಕೆದಾರರ ಖಾತೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಎಲ್ ಪಿಜಿ ಸಿಲಿಂಡರ್ ಗಳು ಹೋಮ್ ಡೆಲಿವರಿಯಲ್ಲಿ ಪ್ರಮುಖ ಬದಲಾವಣೆ ಆಗಿದೆ.
0 التعليقات: