Friday, 25 December 2020

ಮಧ್ಯಪ್ರದೇಶದಲ್ಲಿ 'ಲವ್ ಜಿಹಾದ್' ನಿಷೇಧಕ್ಕೆ ಸಚಿವ ಸಂಪುಟ ಒಪ್ಪಿಗೆ : ಬಲವಂತದ ಮತಾಂತರಕ್ಕೆ 5-10 ವರ್ಷ ಜೈಲು ಶಿಕ್ಷೆ ಫಿಕ್ಸ್


 ಮಧ್ಯಪ್ರದೇಶದಲ್ಲಿ 'ಲವ್ ಜಿಹಾದ್' ನಿಷೇಧಕ್ಕೆ ಸಚಿವ ಸಂಪುಟ ಒಪ್ಪಿಗೆ : ಬಲವಂತದ ಮತಾಂತರಕ್ಕೆ 5-10 ವರ್ಷ ಜೈಲು ಶಿಕ್ಷೆ ಫಿಕ್ಸ್

ಮಧ್ಯಪ್ರದೇಶ : ಇಂದು ನಡೆದಂತ ಮಧ್ಯಪ್ರದೇಶ ಸಚಿವ ಸಂಪುಟ ಸಭೆಯಲ್ಲಿ, ಧರ್ಮ ಸ್ವತಂತ್ರ (ಧಾರ್ಮಿಕ ಸ್ವಾತಂತ್ರ್ಯ) ಮಸೂದೆ 2020ಕ್ಕೆ ಅನುಮೋದನೆ ನೀಡಿದೆ. ಈ ಮೂಲಕ ಲವ್ ಜಿಹಾದ್ ಗೆ ನಿಷೇಧ ಹೇರಲಾಗಿದೆ. ಒಂದು ವೇಳೆ ಯಾರನ್ನಾದರೂ ಬಲವಂತವಾಗಿ ಮತಾಂತರ ಮಾಡಿದರೆ 1-5 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಇಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ಲವ್ ಜಿಹಾದ್ ನಿಷೇಧ ಕಾನೂನಿಗೆ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಲವ್ ಜಿಹಾದ್ ನಿಷೇಧದ ಕಾನೂನು ಮಧ್ಯಪ್ರದೇಶದಲ್ಲಿ ಜಾರಿಗೊಂಡಂತೆ ಆಗಿದೆ.

ಕಳೆದ ತಿಂಗಳು ಯುಪಿ ಯಲ್ಲಿ ನಡೆದ ಧರ್ಮ ಬಾಹಿರ ಮತಾಂತರ ಸುಗ್ರೀವಾಜ್ಞೆ-2020ಕ್ಕೆ ಉತ್ತರ ಪ್ರದೇಶದ ರಾಜ್ಯಪಾಲರು ಒಪ್ಪಿಗೆ ನೀಡಿದ ನಂತರ ಈ ಅನುಮೋದನೆ ದೊರೆತಿತ್ತು.

ಈ ಮಸೂದೆಯ ಸೆಕ್ಷನ್ 3ರಲ್ಲಿ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಒಂದರಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ.ಗಿಂತ ಕಡಿಮೆ ದಂಡ ವನ್ನು ವಿಧಿಸಬಹುದಾಗಿದೆ. ಧರ್ಮವನ್ನು ಮುಚ್ಚಿಡುವ ಪ್ರಯತ್ನ ಮಾಡಿದರೆ 3ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 50 ಸಾವಿರ ರೂ ದಂಡ ವಿಧಿಸಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಪ್ರಾಪ್ತ ಅಥವಾ ಮಹಿಳೆ ಮತಾಂತರಕ್ಕೆ ಬಲವಂತ ಮಾಡಿದರೆ, ಅಪರಾಧಿಗೆ 2 ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ವರೆಗೆ ದಂಡ ವಿಧಿಸಬಹುದು. ಇಂತಹ ಧಾರ್ಮಿಕ ಮತಾಂತರಕ್ಕೆ ಬಲಿಯಾದವರ ರಕ್ತ ಸಂಬಂಧಿಗಳು ದೂರು ಸಲ್ಲಿಸಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಸಾಮೂಹಿಕ ಧಾರ್ಮಿಕ ಮತಾಂತರಕ್ಕೆ (ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ) ಯತ್ನಿಸಿದರೆ ಐದರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.SHARE THIS

Author:

0 التعليقات: