ಕೋವಿಡ್ ನಿಯಮ ಉಲ್ಲಂಘಿಸಿದರೆ 5 ಸಾವಿರದಿಂದ 1 ಲಕ್ಷದ ತನಕ ದಂಡ!
ಬೆಂಗಳೂರು, ಡಿಸೆಂಬರ್ 6 : ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದರೆ ಭಾರಿ ಮೊತ್ತದ ದಂಡ ವಿಧಿಸುವ ನಿಯಮಗಳನ್ನು ಬಿಬಿಎಂಪಿ ಜಾರಿಗೆ ತಂದಿದೆ. 5 ಸಾವಿರದಿಂದ 1 ಲಕ್ಷ ರೂ. ತನಕ ದಂಡ ವಿಧಿಸಲು ಹೊಸ ನಿಯಮದಲ್ಲಿ ಅವಕಾಶವಿದೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020ರ ಸೆಕ್ಷನ್ 4, 15 ಹಾಗೂ 17ರ ಅನ್ವಯ ದಂಡವನ್ನು ಹಾಕಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಸಂಬಂಧ ಈ ನಿಯಮ ಜಾರಿಗೆ ತರಲಾಗಿದೆ.
ಕಲ್ಯಾಣ ಮಂಟಪ, ಹೋಟೆಲ್, ಚಿತ್ರಮಂದಿರ, ಮಾಲ್, ಅಂಗಡಿ, ಕಾರ್ಯಮ್ರಕಮಗಳ ಸಂಯೋಜಕರಿಗೆ ದಂಡವನ್ನು ಹಾಕಲಾಗುತ್ತದೆ. ಈ ನಿಯಮಗಳ ಅನಿಷ್ಠಾನದ ಹೊಣೆಯನ್ನು ವಾರ್ಡ್ಗಳಲ್ಲಿರುವ ಮಾರ್ಷಲ್ಗಳ ಮೂಲಕ ನಿರ್ವಹಣೆ ಮಾಡಲಾಗುತ್ತದೆ.
ಆರೋಗ್ಯ ನಿರೀಕ್ಷಕರು, ಮಾರ್ಷಲ್ಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಆದ್ದರಿಂದ, ಇನ್ನು ಮುಂದೆ ಕಾರ್ಯಕ್ರಮ ಆಯೋಜಕರು, ಕಲ್ಯಾಣ ಮಂಟಪ, ಹೋಟೆಲ್ಗಳ ಮಾಲೀಕರು ಜನರು ಕೋವಿಡ್ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು.
0 التعليقات: