Monday, 14 December 2020

ಚಿನ್ನದ ದರ ₹ 460ರಷ್ಟು ಇಳಿಕೆ


ಚಿನ್ನದ ದರ ₹ 460ರಷ್ಟು ಇಳಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನ, ಬೆಳ್ಳಿ ದರ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರ ₹ 460ರಷ್ಟು ಇಳಿಕೆಯಾಗಿ ₹ 48,371ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 629ರಷ್ಟು ಇಳಿಕೆಯಾಗಿ ₹ 62,469ರಲ್ಲಿ ಮಾರಾಟವಾಗಿದೆ.


ಕೋವಿಡ್‌-19ಕ್ಕೆ ಲಸಿಕೆ ಲಭ್ಯವಾಗುತ್ತಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಮಾರಾಟದ ಒತ್ತಡಕ್ಕೆ ಒಳಗಾಗಿ ಬೆಲೆ ಇಳಿಕೆ ಆಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್ ಪಟೇಲ್‌ ತಿಳಿಸಿದ್ದಾರೆ.



SHARE THIS

Author:

0 التعليقات: