'ದೆಹಲಿ ಚಲೋ ಪ್ರತಿಭಟನೆ' : ರೈತರು-ಕೇಂದ್ರದ ನಡುವಿನ ಮಾತುಕತೆ ಮುಕ್ತಾಯ, ಡಿ.4 ಕ್ಕೆ ಮತ್ತೆ ಚರ್ಚೆ
ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಈ ನಡುವೆ ಕೇಂದ್ರ ಸರ್ಕಾರದ ಮನವಿ ಮೇರೆಗೆ ರೈತ ಸಂಘಟನೆಗಳು ಕೇಂದ್ರದ ನಾಯಕರ ಜೊತೆಗೆ ಮಾತುಕತೆ ನಡೆಸಿದೆ.
ಸದ್ಯ , ರೈತರು-ಕೇಂದ್ರದ ನಡುವಿನ ಮಾತುಕತೆ ಮುಕ್ತಾಯವಾಗಿದ್ದು. ಡಿ 4 ಕ್ಕೆ ಮತ್ತೆ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಚರ್ಚೆ ನಡೆಯಲಿದೆ .
ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸಬೇಕು, ರೈತರ ಮನವೊಲಿಸಬೇಕು ಎಂಬ ಉದ್ದೇಶದಿಂದ ಕೇಂದರ ಸರ್ಕಾರ ರೈತರ ಜೊತೆ ಮಾತುಕತೆಗೆ ಮುಂದಾಗಿತ್ತು. ಆದರೆ ಮಾತುಕತೆ ವೇಳೆ ಯಾವುದೇ ನಿರ್ಣಯಕ್ಕೆ ಬಾರದ ಹಿನ್ನೆಲೆ ಡಿ.4 ಕ್ಕೆ ಮತ್ತೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.
0 التعليقات: