ಡಿಸೆಂಬರ್ 31 ರಂದು ಸಿಬಿಎಸ್ಇಯ ಪರೀಕ್ಷಾ ದಿನಾಂಕ ಘೋಷಣೆ
ನವದೆಹಲಿ: ಡಿಸೆಂಬರ್ 22 ರಂದು ಕೊರೊನಾ ಹಿನ್ನೆಲೆ ಮುಂದೂಡಲಾಗಿದೆ ಟ್ವೀಟ್ ಮೂಲಕ ತಿಳಿಸಿದ್ದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಇದೀಗ ಸಿಬಿಎಸ್ಇಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯ ದಿನಾಂಕವನ್ನು ಇದೇ ಡಿಸೆಂಬರ್ 31 ರಂದು ಸಂಜೆ 6 ಗಂಟೆಗೆ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಅದರೊಂದಿಗೆ, "ನಾನು ಈಗಾಗಲೇ ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸಂದೇಶಗಳನ್ನ ಸ್ವೀಕರಿಸಿದ್ದೇನೆ. ಕೊರೊನಾ ಸಾಂಕ್ರಾಮಿಕ ರೋಗದ ಆತಂಕ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದರಂತೆ ಫೆಬ್ರವರಿಯಲ್ಲಿ ನಾವು ಸಿಬಿಎಸ್ಇ ಪರೀಕ್ಷೆಯನ್ನ ಮಾಡುವುದಿಲ್ಲ" ಎಂದು ಸಚಿವ ಸ್ಪಷ್ಟನೆ ಏನು ನೀಡಿದ್ದಾರೆ.
0 التعليقات: