Monday, 14 December 2020

ವಿಜೃಂಭಣೆಯಿಂದ ನಡೆದ ಕಬಕ ಉಸ್ತಾದರ ನೇತೃತ್ವದ 30 ನೇ ಜಾಲಾಲಿಯ್ಯಾ ರಾತೀಬ್, ಜನಸಾಗರವಾದ ಕಬಕ ಉಸ್ತಾದರ ಮನೆ


 ವಿಜೃಂಭಣೆಯಿಂದ ನಡೆದ ಕಬಕ ಉಸ್ತಾದರ ನೇತೃತ್ವದ 30 ನೇ ಜಾಲಾಲಿಯ್ಯಾ ರಾತೀಬ್, ಜನಸಾಗರವಾದ ಕಬಕ ಉಸ್ತಾದರ ಮನೆ

ವಿಟ್ಲ: ಕಬಕ ಉಸ್ತಾದ್ ಎಂದೇ ಪ್ರಸಿದ್ಧಿ ಪಡೆದ ಮುಹಮ್ಮದ್ ಮದನಿ ಬಾರೆಬೆಟ್ಟು ರವರ ನೇತೃತ್ವದಲ್ಲಿ ಎಲ್ಲಾ ವರ್ಷವೂ  ನಡೆಯುತ್ತಿದ್ದ ಜಲಾಲಿಯ ರಾತೀಬ್ ಮಜ್ಲಿಸ್‌, ಇದರ 30ನೇ ವಾರ್ಷಿಕ ಕಬಕ ಉಸ್ತಾದರ ಮನೆಯಾದ "ಗರೀಬ್ ನವಾಝ್ ಮಂಝಿಲ್ ನೀರಪಳಿಕೆ", ಬಾರೆಬೆಟ್ಟುವಿನಲ್ಲಿ ಡಿಸೆಂಬರ್ 13 ರಂದು ಅತೀ ವಿಜೃಂಭಣೆಯಿಂದ ನಡೆಯಿತು.



   ಉಪ್ಪಳ ಅಸಯ್ಯಿದ್ ಕೋಯಕುಟ್ಟಿ ತಂಙಳ್ ರವರ ಪುತ್ರ ಅಸಯ್ಯಿದ್ ನಝೀರ್ ತಂಙಳ್ ರವರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಕಬಕ ಉಸ್ತಾದ್ ನೇತೃತ್ವ ನೀಡಿದರು. ನಾಡಿನ ಹಲವಾರು ಭಾಗಗಳಿಂದ ಆಗಮಿಸಿದ ಸಾವಿರಾರು ವಿಶ್ವಾಸಿಗಳು ಉಸ್ತಾದರ ಭಕ್ತಿ ಪೂರ್ಣ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

   ಪ್ರಸ್ತುತ ಕಾರ್ಯಕ್ರಮದಲ್ಲಿ ಕಲ್ಲೇಗ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಜಲಾಲಿ ಮುಖ್ಯ ಪ್ರಭಾಷಣ ಮಾಡಿದರು. ಅಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಅಬ್ದುಲ್ ಖಾದರ್ ಮದನಿ ಉದ್ಯಾವರ, ಸುಲೈಮಾನ್ ಮದನಿ ಬಾರೆಬೆಟ್ಟು, ಮಹ್ಮೂದ್ ಸಅದಿ ಕುಕ್ಕಾಜೆ ಖತೀಬ್ ಬಾರೆಬೆಟ್ಟು, ಮಹ್ಮೂದುಲ್ ಫೈಝಿ ವಾಲೆಮುಂಡೊವು, ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ, ಮುಹಮ್ಮದ್ ಅಲಿ ಸಖಾಫಿ ಸುರಿಭೈಲ್, ಇಬ್ರಾಹಿಂ ಮದನಿ ಬೀಟಿಗೆ, ಮುಹಮ್ಮದ್ ಫಾಳಿಲಿ ಖಾಮಿಲ್ ಸಖಾಫಿ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಅಬ್ದುಲ್ ಮಜೀದ್ ಮದನಿ, ಬದ್ರುದ್ದೀನ್ ಮದನಿ ಕಿಲ್ಲೂರು, ಇಬ್ರಾಹಿಂ ಮದನಿ ಸೇರ, ರಫೀಕ್ ಮದನಿ ಸೇರ, ಉಮ್ಮರ್ ಹಾಜಿ ರಾಜ್ ಕಮಲ್, ಹನೀಫ್ ಹಾಜಿ ರಾಜ್ ಕಮಲ್, ಉಮ್ಮರ್ ಕರಾವಳಿ, ಮೊಯ್ದು ಹಾಜಿ ಕಂಬಳಬೆಟ್ಟು, ಮೂಸ ಕಾರ್ ಪೊಯಿಂಟ್ ಕಬಕ, ಹಮೀದ್ ರೋಯಲ್,  ಉಮ್ಮರ್ ಮಲ್ನಾಡ್ ಮುರ, ಉಮ್ಮರ್ ಫಾರೂಕ್ ಬ್ರೈಟ್ ಪೋಳ್ಯ, ಇಬ್ರಾಹಿಂ ಕಲ್ಲಂದಡ್ಕ, ಖಾಲಿದ್ ಕಬಕ ಕೆ.ಎಸ್.ಎ, ಸಹಿತ ಹಲವಾರು ಉಲಮಾ, ಉಮರಾ ನಾಯಕರು ಪಾಲ್ಗೊಂಡಿದ್ದರು.

ಅಬ್ದುಲ್ ಹಮೀದ್ ಹಾಜಿ ಕಬಕ, ಕಬಕ ಯೂತ್ ಪ್ರೆಂಡ್ಸ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ,ಅಹ್ಮದ್ ಹಾಜಿ ಕಬಕ, ಮುನೀರ್ ಕಬಕ, ಫಾರೂಕ್ ಕಬಕ,ಅನ್ವರ್ ಸ್ಪೋರ್ಟ್ಸ್ ಮಸ್ಕತ್, ಖಲಂದರ್ ಕಬಕ, ಹಮೀದ್ ಬಗ್ಗುಮೂಲೆ, ಅಯ್ಯೂಬ್ ಕಬಕ, ಮೊಹಮ್ಮದ್ ರಫೀಕ್ ಬ್ರೈಟ್ ಸಹಿತ ಹಲವಾರು ಮಂದಿ ಸಹಕರಿಸಿದರು.

ಶೈಖುನಾ ಕಬಕ ಉಸ್ತಾದರ ಶಿಷ್ಯಂದಿರ ಬಳಗದೊಂದಿಗೆ ಕಬಕದ ಹಾಗೂ ಸ್ಥಳೀಯ ಸುನ್ನೀ ಸಂಘಟನೆಯ ಯುವಕರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

ಸ್ಥಳೀಯರಾದ ಮೋನಪ್ಪ ಗೌಡ ಬಾರೆಬೆಟ್ಟು ಹಾಗೂ ಅಬ್ದುಲ್ ಖಾದರ್ ಬಾರೆಬೆಟ್ಟು, ಕಾರ್ಯಕ್ರಮಕ್ಕೆ ಆಗಮಿಸಿದ ವಾಹನಗಳ ನಿಲುಗಡೆಗೆ ಬೇಕಾದ ಸ್ಥಳ ಸೌಕರ್ಯಕ್ಕೆ  ಸಹಕರಿಸಿದ್ದು ಬಹಳ ವಿಶೇಷವಾಗಿತ್ತು.

 ಕಾರ್ಯಕ್ರಮದ ಕೊನೆಯಲ್ಲಿ ಸಾವಿರಾರು ಜನರಿಗೆ ಅನ್ನದಾನ ವಿತರಣೆ  ನಡೆಯಿತು.





SHARE THIS

Author:

0 التعليقات: