ಹೆಲಿಕಾಪ್ಟರ್ ಪತನ ಇಬ್ಬರು ಪೈಲೆಟ್ ಸೇರಿ 2 ಸೈನಿಕರ ಸಾವು
ಇಸ್ಲಾಮಾಬಾದ್,ಡಿ.27- ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ ಸೇರಿದಂತೆ 4 ಸೈನಿಕರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್ ಬಾಲ್ಟಿಸ್ತಾನದ ಮಿನಿಮಾರ್ಗ್ ಪ್ರದೇಶದಲ್ಲಿ ನಡೆದಿದೆ.
ಅಪಘಾತದಲ್ಲಿ ಪೈಲೆಟ್ ಮೇಜರ್ ಎಂ. ಹುಸೇನ್ ಮತ್ತು ಸಹಪೈಲಟ್ ಮೇಜರ್ ಅಯಾಜ್ ಹುಸೇನ್, ನಾಯಕ್ ಇಂಜಿಮಾಮ್ ಆಲಂ ಮತ್ತು ಪಾಕಿಸ್ತಾನದ ಸೈನಿಕರಾದ ಮುಹಮ್ಮದ್ ಫಾರೂಕ್ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ಖಚಿತಪಡಿಸಿದೆ.
ಸಿಪಾಯಿ ಅಬ್ದುಲ್ ಖದೀರ್ ಎಂಬ ಸೈನಿಕನ ಶವವನ್ನು ಸ್ಕಾರ್ದುನಲ್ಲಿರುವ ಸಂಯೋಜಿತ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದ ಈ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿತು. ದುರಾದೃಷ್ಟವಶಾತ್ ಮತ್ತೊಂದು ಅಪಘಾತ ಸಂಭವಿಸಿದೆ ಎಂದು ಸೇನೆ ತಿಳಿಸಿದೆ.
0 التعليقات: