ಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು
ಲಕ್ನೋ, ಡಿಸೆಂಬರ್ 30: ಬ್ರಿಟನ್ನ ರೂಪಾಂತರಿ ಕೊರೊನಾ ಸೋಂಕು ಉತ್ತರ ಪ್ರದೇಶದಲ್ಲಿರುವ 2 ವರ್ಷದ ಮಗುವಿಗೆ ತಗುಲಿದೆ.
ಭಾರತದಲ್ಲಿ ಕೊರೊನಾ ವೈರಸ್ 2ನೇ ಅಲೆ ನಿಧಾನಗತಿಯಲ್ಲಿ ಆರಂಭವಾಗುತ್ತಿರುವ ಎಲ್ಲಾ ಬೆಳವಣಿಗೆಗಳು ಕಂಡು ಬರುತ್ತಿವೆ.
ಭಾರತದಲ್ಲಿ ರೂಪಾಂತರಿ ಕೊರೋನಾ ವೈರಸ್ ಕಾಟ ಶುರುವಾಗಿದ್ದು, ಈಗಾಗಲೇ 20 ಮಂದಿಯಲ್ಲಿ ಈ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದೀಗ ಉತ್ತರಪ್ರದೇಶದಲ್ಲಿ 2 ವರ್ಷದ ಮಗು ಹಾಗೂ ಪೋಷಕರಲ್ಲೂ ಸೋಂಕು ಪತ್ತೆಯಾಗಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.
ನಿನ್ನೆಯಷ್ಟೇ ರೂಪಾಂತರಿ ಕೊರೊನಾ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿತ್ತು.
ಡಿಸೆಂಬರ್ 14 ರಂದು ಲಂಡನ್ ನಿಂದ ಮಗು ಹಾಗೂ ಮಗುವಿನ ತಾಯಿ, ತಂದೆ ಮೀರತ್'ಗೆ ಆಗಮಿಸಿದ್ದರು. ಮೂವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮೂವರಲ್ಲೂ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿದೆ.
ಈಗಾಗಲೇ ಮೂವರನ್ನೂ ಸುಭಾರ್ಟಿ ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಮೂವರ ಆರೋಗ್ಯವನ್ನೂ ಅಧಿಕಾರಿಗಳು ಆಗಾಗ ಪರಿಶೀಲಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
0 التعليقات: