ʼಮಂಡ್ಯ ಪೋರಿʼಯ ಮೊಹಬ್ಬತ್ ಸಾಧನೆ, ʼಇಂಡಿಯಾ ಬುಕ್ ಆಫ್ ರೆಕಾರ್ಡ್ʼ ತನ್ನ ಹೆಸ್ರು ಸೇರಿಸಿದ 2 ವರ್ಷದ ಕಂದಮ್ಮ
ಮಂಡ್ಯ: 2 ವರ್ಷ 8 ತಿಂಗಳ ಪುಟ್ಟ ಪೋರಿಯೊಬ್ಬಳು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರು ಬರೆಸಿಕೊಂಡು ಹುಬ್ಬೇರಿಸುವಂತೆ ಮಾಡಿದ್ದಾಳೆ.
ತೊದಲು ನುಡಿಯ ಈ ಪುಟ್ಟ ಪೋರಿ, ಅಸಾಧಾರಣ ಬುದ್ದಿವಂತೆ. ಈಕೆಯ ನೆನಪಿನ ಶಕ್ತಿಯಂತೂ ಅದ್ಭುತ. 32 ವಿಭಾಗದ ಸಾವಿರಾರು ಹೆಸರುಗಳನ್ನ ಹೇಳುವುದರ ಜೊತೆಗೆ ಪದ್ಯ, ಶ್ಲೋಕ, ಕಥೆಗಳನ್ನು ಹೇಳುತ್ತಾಳೆ. 32 ರಾಷ್ಟ್ರದ ಹೆಸರು, ರಾಜಧಾನಿ, ಅಲ್ಲಿನ ಪ್ರಸಿದ್ಧತೆಯ ಬಗ್ಗೆ, ಸೌರವ್ಯೂಹದ ಗ್ರಹಗಳು, ಕನ್ನಡ, ಇಂಗ್ಲಿಷ್ ವರ್ಣಮಾಲೆ, ಪದಗಳ ರಚನೆ, ಹಣ್ಣುಗಳು, ಪುಷ್ಪಗಳು, ಸಂಖ್ಯೆ, ಪ್ರಕೃತಿಯ ವಸ್ತುಗಳ ಹೆಸರು, ಋತುಗಳು, ವಿಜ್ಞಾನಿಗಳ ಹೆಸರು, ಅವರ ಅನ್ವೇಷಣೆ, ರಾಷ್ಟ್ರಗಳ ಪ್ರಾಣಿ, ಪುಷ್ಪ, ಲಾಂಛನ ಯಾವುದನ್ನೇ ಕೇಳಿದ್ರು ಥಟ್ ಅಂತಾ ಉತ್ತರ ಹೇಳ್ತಾಳೆ. ಈ ಕಂದಮ್ಮನ ನೆನಪಿನ ಶಕ್ತಿ ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಅಸಾಧಾರಣ ನೆನಪಿನ ಶಕ್ತಿಯ ಈ ಪ್ರತಿಭೆ ನಮ್ಮ ಕರುನಾಡ ಕುಡಿ ಅನ್ನೋದು ಕನ್ನಡಿಗರ ಹೆಮ್ಮೆ. ಹೌದು, ಈ ಪೋರಿಯ ಹೆಸ್ರು ಮೌಲ್ಯ ಅಂತಾ. ಈಕೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ತೊಂಟೇಶ್ರವರ ಮೊಮ್ಮಗಳು. ಸಧ್ಯ ಈ ಪುಟಾಣಿಯ ಸಾಧನೆಗೆ ಕುಟುಂಬದವ್ರು ಮಾತ್ರವಲ್ಲ ಇಡೀ ಊರಿಗೆ ಊರೇ ಸಂತಸ ವ್ಯಕ್ತ ಪಡಿಸ್ತಿದೆ.
0 التعليقات: