Monday, 14 December 2020

2 ದಿನದಿಂದ ಬಾಗಿಲು ತೆರೆಯದ ಮನೆ ನೋಡಿದ ಸ್ಥಳೀಯರಿಗೆ ಬಿಗ್ ಶಾಕ್: ಒಂದೇ ಕುಟುಂಬದ ಮೂವರ ಆತ್ಮಹತ್ಯೆ


2 ದಿನದಿಂದ ಬಾಗಿಲು ತೆರೆಯದ ಮನೆ ನೋಡಿದ ಸ್ಥಳೀಯರಿಗೆ ಬಿಗ್ ಶಾಕ್: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಮಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಳೆಯಂಗಡಿಯ ಕಲ್ಲಾಪು ಬಳಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ವಿನೋದ್ ಸಾಲಿಯಾನ್(38), ಪತ್ನಿ ರಚನಾ(38), ಮಗು ಸಾಧ್ಯ ಸಾಲಿಯಾನ್(10) ಮೃತಪಟ್ಟವರೆಂದು ಹೇಳಲಾಗಿದೆ. ಎರಡು ದಿನಗಳಿಂದ ಕುಟುಂಬದವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಸ್ಥಳೀಯರು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಕೊರೋನಾ ಕಾರಣದಿಂದ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದ ವಿನೋದ್ ಕುಟುಂಬದವರು ಕಳೆದ ಒಂದು ವರ್ಷದಿಂದ ಹಳೆಯಂಗಡಿಯಲ್ಲಿ ವಾಸವಾಗಿದ್ದರು. ಮುಲ್ಕಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.



SHARE THIS

Author:

0 التعليقات: