Sunday, 27 December 2020

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ : 250 ಕಿಮೀ ಉದ್ದ ಸಾಲುಗಟ್ಟಿನಿಂತ 1,500 ವಾಹನಗಳು


ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ : 250 ಕಿಮೀ ಉದ್ದ ಸಾಲುಗಟ್ಟಿನಿಂತ 1,500 ವಾಹನಗಳು

ಜಮ್ಮು-ಕಾಶ್ಮೀರ : ಜಮ್ಮುವಿನ ಶ್ರೀನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಬೆಳಿಗ್ಗೆ 9.30ಕ್ಕೆ ಗುಡ್ಡ ಕುಸಿತಗೊಂಡು, ಸಂಚಾರ ಅಸ್ತವ್ಯಸ್ಥವಾಗಿ ಸುಮಾರು 1,500 ವಾಹನಗಳು 250 ಕಿಲೋಮೀಟರ್ ಉದ್ದಕ್ಕೆ ಸಾಲುಗಟ್ಟಿ ನಿಂತು ಹೈರಾಣಾಗಿ, ಕೊನೆಗೆ ರಾತ್ರಿ 7.30ಕ್ಕೆ ಕುಸಿತಗೊಂಡ ಗುಡ್ಡವನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಳಲಾಗಿದೆ.

ಇಂದು ಬೆಳಿಗ್ಗೆ 9.30 ಗಂಟೆಗೆ ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯ ರಂಬಾ ಜಿಲ್ಲೆಯ ದುಗ್ಗಿ ಪುಲ್ಲಿ ಚಂದ್ರೇರ್ ಕೋಟ್ ಹತ್ತಿರದ ಸಿಆರ್ ಪಿ ಎಫ್ ಕ್ಯಾಂಪ್ ಬಳಿಯಲ್ಲಿ ಗುಡ್ಡ ಕುಸಿತಗೊಂಡಿತ್ತು. ಬೆಳಿಗ್ಗೆಯಿಂದ ರಾತ್ರಿ 7.30ರವರೆಗೆ ಗುಡ್ಡ ಕುಸಿತಗೊಂಡಂತ ಮಣ್ಣನ್ನು ಸರಿಸಿ, ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹರಸಾಹಸ ಪಡುವಂತಾಯಿತು.

ಗುಡ್ಡ ಕುಸಿತಗೊಂಡು ಸುಮಾರು 1500 ವಾಹನಗಳು 250 ಕಿಲೋಮೀಟರ್ ದೂರದವರೆಗೆ ಸಾಲುಗಟ್ಟಿ 10 ಗಂಟೆಗಳ ಕಾಲ ಕಾಯುವಂತಾಯಿತು. ಅಂತಿಮವಾಗಿ 7.30ಕ್ಕೆ ಕುಸಿತಗೊಂಡ ಗುಡ್ಡವನ್ನು ಸರಿ, ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.SHARE THIS

Author:

0 التعليقات: