ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ : ಚೆನ್ನೈ ಏರ್ ಪೋರ್ಟ್ ನಲ್ಲಿ ಬರೋಬ್ಬರಿ 2.47 ಕೋಟಿ ಮೌಲ್ಯದ ಚಿನ್ನ ಜಪ್ತಿ
ಚೆನ್ನೈ : ವಿದೇಶದಿಂದ 2.47 ಕೋಟಿ ರೂ ಮೌಲ್ಯದ 4.77 ಕೆಜಿ ಚಿನ್ನ ಕಳ್ಳಸಾಗಣೆಗೆ ಯತ್ನಿಸಿದ ಮೂವರು ಆರೋಪಿಗಳು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂದಿಸಿದ್ದು, ಬಂಧಿತರನ್ನು ನಿಜಾಲ್ ರವಿ (29) ನಿಯಮ್ತುಲ್ಲಾ ಹದಿ (35) ಎಂದು ಗುರುತಿಸಲಾಗಿದೆ.
ಏರ್ ಇಂಟಲಿಜೆನ್ಸ್ ಯೂನಿಟ್ ಮಾಹಿತಿಯ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ, ದುಬೈನಿಂದ ಎಮಿರೈಟ್ಸ್ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕರನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಚಿನ್ನ ಪತ್ತೆಯಾಗಿದೆ.
0 التعليقات: