Friday, 18 December 2020

ರಾಜ್ಯ ಸರ್ಕಾರದಿಂದ ಡಿ.22ರಂದು ಗ್ರಾ.ಪಂಚಾಯ್ತಿ ಚುನಾವಣೆಗೆ 'ವೇತನ ಸಹಿತ ರಜೆ' ಘೋಷಣೆ


ರಾಜ್ಯ ಸರ್ಕಾರದಿಂದ ಡಿ.22ರಂದು ಗ್ರಾ.ಪಂಚಾಯ್ತಿ ಚುನಾವಣೆಗೆ 'ವೇತನ ಸಹಿತ ರಜೆ' ಘೋಷಣೆ

ಬೆಂಗಳೂರು : ರಾಜ್ಯದಲ್ಲಿ 30 ಜಿಲ್ಲೆಗಳ 5,728 ಗ್ರಾಮ ಪಂಚಾಯ್ತಿಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಗ್ರಾಮ ಪಂಚಾಯ್ತಿಗಳಿಗೆ ದಿನಾಂಕ 22-12-2020ರಂದು ಹಾಗೂ ಎರಡನೇ ಹಂತದ ಗ್ರಾಮ ಪಂಚಾಯ್ತಿಗೆ ದಿನಾಂಕ 27-12-2020ರಂದು ಮತದಾನ ನಡೆಯಲಿದೆ. ದಿನಾಂಕ 22-12-2020ರ ಮಂಗಳವಾರದಂದು ಕರ್ನಾಟಕ ಪಂಚಾಯತ್ ರಾಜ್ ( ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 114ನ್ನು ಒದಿಕೊಂಡಂತೆ, ಪ್ರಜಾ ಪ್ರತಿನಿಧಿ ಕಾಯ್ದೆ 1954ರ ಸೆಕ್ಷನ್-135ಬಿ ಅಡಿಯಲ್ಲಿ ವೇತನ ಸಹಿತ ರಜೆ ಘೋಷಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಸಿಆಸು ಇಲಾಖೆ(ರಾಜ್ಯ ಶಿಷ್ಠಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ-1 ಮೊಹಮ್ಮದ ನಯೀಮ್ ಮೊಮಿನ್ ಆಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿನ 30 ಜಿಲ್ಲೆಗಳ 5728 ಗ್ರಾಮ ಪಂಚಾಯ್ತಿಗಳಿಗೆ 2 ಹಂತಗಳಲ್ಲಿ ಚುನಾವಣೆ ನಡೆಸಲು ಆದೇಶಿಸಿದೆ. ಚುನಾವಣಾ ವೇಳಾಪಟ್ಟಿಯಂತೆ ಮೊದಲ ಹಂತಕ್ಕೆ ದಿನಾಂಕ 22-12-2020ರಂದು ಮಂಗಳವಾರ ಹಾಗೂ ಎರಡನೇ ಹಂತಕ್ಕೆ ದಿನಾಂಕ 27-12-2020ರ ಭಾನುವಾರ ಮತದಾನ ನಡೆಯಲಿದೆ.

ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು, ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರೆ Establishment ಗಳಲ್ಲಿ ಖಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ದಿನಾಂಕ 22-12-2020ರ ಮಂಗಳವಾರದಂದು ಕರ್ನಾಟಕ ಪಂಚಾಯತ್ ರಾಜ್ ( ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 114ನ್ನು ಒದಿಕೊಂಡಂತೆ, ಪ್ರಜಾ ಪ್ರತಿನಿಧಿ ಕಾಯ್ದೆ 1954ರ ಸೆಕ್ಷನ್-135ಬಿ ಅಡಿಯಲ್ಲಿ ವೇತನ ಸಹಿತ ರಜೆ ಘೋಷಿಸಿ ಆದೇಶಿದ್ದಾರೆ.

ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು. ಈ ಚುನಾವಣೆ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು ಎಂದು ತಿಳಿಸಿದ್ದಾರೆ.SHARE THIS

Author:

0 التعليقات: