Tuesday, 29 December 2020

ಗ್ರಾಮ ಪಂಚಾಯತ್ ಚುನಾವಣೆ 2020 ಮತ ಎಣಿಕೆಗೆ ಸರ್ವ ಸಿದ್ಧತೆ


ಗ್ರಾಮ ಪಂಚಾಯತ್ ಚುನಾವಣೆ 2020 ಮತ ಎಣಿಕೆಗೆ ಸರ್ವ ಸಿದ್ಧತೆ

ಗದಗ:   ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಮೊದಲನೇ ಹಾಗೂ ಎರಡನೇ ಹಂತದ ಮತದಾನವು  ಜರುಗಿದ್ದು ಡಿ.30 ರಂದು ಗದಗ ಜಿಲ್ಲೆಯ 7 ತಾಲೂಕಾ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸರ್ವ ಸಿದ್ದತೆ ಮಾಡಲಾಗಿದೆ.

ಮೇಜುಗಳ ವ್ಯವಸ್ಥೆ : ಗದಗ ತಾಲೂಕಿನ 150 ಕ್ಷೇತ್ರಗಳ ಮತ ಎಣಿಕೆಗಾಗಿ 53 ಮೇಜು  , ಶಿರಹಟ್ಟಿ ತಾಲೂಕಿನ 75 ಕ್ಷೇತ್ರಗಳ ಮತ ಎಣಿಕೆಗಾಗಿ 28 ಮೇಜು ,  ಲಕ್ಷ್ಮೇಶ್ವರ ತಾಲೂಕಿನ 66 ಮತ ಎಣಿಕೆಗಾಗಿ 25 ಮೇಜು, ಮುಂಡರಗಿ ತಾಲೂಕಿನ 101 ಕ್ಷೇತ್ರಗಳ ಮತ ಎಣಿಕೆಗಾಗಿ 38 ಮೇಜು , ರೋಣ ತಾಲೂಕಿನ 120 ಕ್ಷೇತ್ರಗಳ ಮತ ಎಣಿಕೆಗಾಗಿ  44 ಮೇಜು , ನರಗುಂದ ತಾಲೂಕಿನ 56 ಕೇತ್ರಗಳ ಮತ ಎಣಿಕೆಗಾಗಿ 21 ಮೇಜು , ಗಜೇಂದ್ರಗಡ ತಾಲೂಕಿನ 61 ಕ್ಷೇತ್ರಗಳಿಗೆ 23 ಮೇಜುಗಳ ವ್ಯವಸ್ಥೆ ಮಾಡಲಾಗಿದೆ.  ಒಟ್ಟಾರೆಯಾಗಿ ಗದಗ ಜಿಲ್ಲೆಯ 629 ಕ್ಷೇತ್ರಗಳ ಮತ ಎಣಿಕೆಗಾಗಿ 234 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯದಲ್ಲಿ ಕನಿಷ್ಟ 3 , ಗರಿಷ್ಟ 5 ಸುತ್ತುಗಳಿರಲಿವೆ.

       ಮತ ಎಣಿಕೆಯು ನಾಳೆ ದಿ.30ರಂದು ಬೆ 8 ರಿಂದ ಪ್ರಾರಂಭವಾಗಲಿದ್ದು ಎಣಿಕೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ತಾಲೂಕುಗಳಿಗೆ ನೇಮಕಾತಿ ಮಾಡಲಾಗಿರುತ್ತದೆ.  ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ ಹಾಗೂ ಇಬ್ಬರು ಎಣಿಕೆ ಸಹಾಯಕರು ಇರುತ್ತಾರೆ.  ಪ್ರತಿ ಎಣಿಕೆ ಕೊಠಡಿಗೆ ಒಬ್ಬ ಗ್ರೂಪ್ ಡಿ ನೌಕರರನ್ನು ನೇಮಿಸಲಾಗಿರುತ್ತದೆ.  



SHARE THIS

Author:

0 التعليقات: