ಗ್ರಾಮಪಂಚಾಯಿತಿ ಚುನಾವಣೆ- 2020 :ಇಂದು ಎರಡನೇ ಹಂತದ 2,709 ಗ್ರಾಪಂಗಳಿಗೆ ಮತದಾನ
ಬೆಂಗಳೂರು : ರಾಜ್ಯದಲ್ಲಿನ ಗ್ರಾಮಪಂಚಾಯಿತಿ ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಇಂದು ಎರಡನೇ ಹಂತದ ಗ್ರಾಪಮಂಚಾಯಿತಿ ಚುನಾವಣೆಗೆ ಮತದಾನ ನಡೆಯಲಿದೆ.
ರಾಜ್ಯದ 109 ತಾಲೂಕುಗಳ 2,709 ಗ್ರಾಮಪಂಚಾಯಿತಿಗಳಿಗೆ ಇಂದು ಮತದಾನ ನಡೆಯಲಿದ್ದು, ಒಟ್ಟು 1,05431 ಅಭ್ಯರ್ಥಿಗಳ ಹಣೆಬರಹವನ್ನು ಈ ಚುನಾವಣೆ ನಿರ್ಣಯಿಸಲಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಈ ನಡುವೆ ಸುಗಮ ಮತದಾನ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅಂತಿಮ ಸಿದ್ಧತೆಗಳ ಮಾಹಿತಿ ಪಡೆದುಕೊಂಡಿದ್ದಾರೆ.
ಮತಗಟ್ಟೆ ಅಧಿಕಾರಿಗಳು, ಮತದಾನಾಧಿಕಾರಿಗಳು, ಪೊಲೀಸರು ಸೇರಿದಂತೆ ಒಟ್ಟು 1,26,810 ಸಿಬ್ಬಂದಿ ಬಲವನ್ನು ಬಳಸಿಕೊಳ್ಳಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಗ್ರಾ.ಪ್ರಂ ಹಾಗೂ ವಾರ್ಡ್ ಗಳಲ್ಲಿ ಬಿಗಿ ಕಣ್ಗಾವಲು ಇರಿಸುವ ವ್ಯವಸ್ಥೆಯಾಗಿದೆ.
ಗ್ರಾಮಪಂಚಾಯಿತಿಗಳ ಎರಡೂ ಹಂತದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಡಿಸೆಂಬರ್ 30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ
0 التعليقات: