Thursday, 24 December 2020

`ಜನ್ ರಸೋಯಿ' ಕ್ಯಾಂಟೀನ್ ತೆರೆದ ಗಂಭೀರ್ : ಇಲ್ಲಿ ಸಿಗುತ್ತೆ 1 ರೂಪಾಯಿಗೆ ಊಟ!


`ಜನ್ ರಸೋಯಿ' ಕ್ಯಾಂಟೀನ್ ತೆರೆದ ಗಂಭೀರ್ : ಇಲ್ಲಿ ಸಿಗುತ್ತೆ 1 ರೂಪಾಯಿಗೆ ಊಟ!

ನವದೆಹಲಿ : ಹೋಟೆಲ್ ಗಳಿಗೆ ಊಟಕ್ಕೆ ಹೋದ್ರೆ ಒಂದು ಊಟಕ್ಕೆ ಕಡಿಮೆ ಅಂದರೂ 30 ರಿಂದ 50 ರೂ ಇರುತ್ತದೆ. ಆದರೆ 1 ರೂಪಾಯಿಗೆ ಊಟ ಸಿಗುತ್ತೆ ಅಂದರೆ ನಂಬ್ತೀರಾ.. ನೀವು.!

ಹೌದು.ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು 1 ರೂಗೆ ಊಟ ನೀಡುವ ಕ್ಯಾಂಟೀನ್ ಆರಂಭಿಸಿದ್ದಾರೆ,. ದೆಹಲಿಯ ಗಾಂಧಿಗರದಲ್ಲಿ 'ಜನ್ ರಸೋಯಿ' ಕ್ಯಾಂಟೀನ್‌ಗಳನ್ನು ಅವರು ಆರಂಭಿಸಿದ್ದಾರೆ. ಅಲ್ಲದೇ ಅಶೋಕ್ ನಗರದಲ್ಲಿ ಗಣರಾಜ್ಯೋತ್ಸವದ ದಿನ ಇನ್ನೊಂದು ಕ್ಯಾಂಟೀನ್ ಆರಂಭಗೊಳ್ಳಲಿದೆ.

ಕಡು ಬಡವರು ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುವುದನ್ನು ನೋಡಿ ನಾನು ಬೇಸರಗೊಂಡಿದ್ದೆ. ಇದಕ್ಕಾಗಿ ಗಾಂಧಿ ನಗರದಲ್ಲಿ ಸುಸಜ್ಜಿತವಾದ 'ಜನ್ ರಸೋಯಿ' ಆಧುನಿಕ ಕ್ಯಾಂಟೀನ್ ಆರಂಭಿಸಲಾಗಿದೆ. ಅಗತ್ಯವಿರುವವರು ಇಲ್ಲಿಗೆ ಬಂದು 1 ರೂಪಾಯಿ ನೀಡಿ ಊಟ ಮಾಡಬಹುದು' ಎಂದು ಗಂಭೀರ್ ಹೇಳಿದ್ದಾರೆ. ಇನ್ನೂ, ಈ ಕ್ಯಾಂಟೀನ್‌ನಲ್ಲಿ 100 ಮಂದಿಗೆ ಊಟ ಮಾಡುವ ವ್ಯವಸ್ಥೆಯಿದ್ದು, ಬಡವರಿಗೆ, ನಿರಾಶ್ರಿತರಿಗೆ ಈ ಹೋಟೆಲ್ ಹೊಟ್ಟೆ ತುಂಬಾ ಊಟ ಹಾಕಲಿದೆ. ನಿಜಕ್ಕೂ ಕ್ರಿಕೆಟಿಗ ಗೌತಮ್ ಗಂಭೀರ್ ಕೆಲಸಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು.
SHARE THIS

Author:

0 التعليقات: