Wednesday, 30 December 2020

ಉಗ್ರರ ಜೊತೆ ಸತತ 18 ಗಂಟೆಗಳ ಕಾಳಗ: ಮೂವರ ಉಗ್ರರನ್ನ ಬಗ್ಗುಬಡಿದ ಭಾರತೀಯ ಸೇನೆ


ಉಗ್ರರ ಜೊತೆ ಸತತ 18 ಗಂಟೆಗಳ ಕಾಳಗ: ಮೂವರ ಉಗ್ರರನ್ನ ಬಗ್ಗುಬಡಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಸತತ 18 ಗಂಟೆಗಳ ಕಾಲ ಗುಂಡಿನ ಕಾಳಗ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನ ಬಗ್ಗು ಬಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಕಳೆದ ರಾತ್ರಿ ಕಾಶ್ಮೀರ ಪೊಲೀಸರು ಉಗ್ರರ ಜೊತೆಗೆ ಗುಂಡಿನ ಚಕಮಕಿ ನಡೆಸಿದ್ದು, ತಕ್ಷಣವೇ ಭಾರತೀಯ ಸೇನೆ ಕೂಡ ಕಾಶ್ಮೀರ ಪೊಲೀಸರ ಜೊತೆ ಸೇರಿ ಗುಂಡಿನ ದಾಳಿ ನಡೆಸಿದೆ. ಶ್ರೀಗನರ ಬಾರಮುಲ್ಲಾ ಹೆದ್ದಾರಿಯ ಲಾಯಪೋರ ವಲಯದಲ್ಲಿ ಎನ್‌ಕೌಂಟರ್ ನಡೆಸಲಾಗಿದ್ದು, ಸಂಜೆ 5 ಗಂಟೆಗೆ ಗುಂಡಿನ ಚಕಮಕಿ ಆರಂಭಗೊಂಡಿತ್ತು.

ಕಾಶ್ಮೀರ ಪೊಲೀಸ್ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಉಗ್ರರು ಮನೆಯಲ್ಲಿ ತಂಗಿರುವ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಈ ಜಂಟಿ ಕಾರ್ಯಚರಣೆಯಲ್ಲಿ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.



SHARE THIS

Author:

0 التعليقات: