Thursday, 17 December 2020

ಉಜಿರೆ ಬಾಲಕ ಕಿಡ್ನಾಪ್: ಬರೋಬ್ಬರಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟ ಅಪಹರಣಕಾರರು..?


ಉಜಿರೆ ಬಾಲಕ ಕಿಡ್ನಾಪ್: ಬರೋಬ್ಬರಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟ ಅಪಹರಣಕಾರರು..?

ಉಜಿರೆಯಲ್ಲಿ 8 ವರ್ಷದ ಬಾಲಕನ ಅಪರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಗೆ ಕರೆ ಮಾಡಿ 17 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ. ಬಾಲಕನ ತಂದೆಗೆ ಕರೆ ಮಾಡಿದ ಅಪಹರಣಕಾರರು, 17 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಿನ್ನೆ ಸಂಜೆ ಬಾಲಕನನ್ನು ಅಪಹರಿಸಲಾಗಿತ್ತು. ಬಾಲಕನಿಗಾಗಿ ಪೊಲೀಸರು ಎಲ್ಲ ಕಡೆ ಹುಡುಕಾಡಿದ್ದಾರೆ. ಉಜಿರೆಯಲ್ಲಿ ನಿನ್ನೆ ಸಂಜೆ ಬಾಲಕನನ್ನು ಅಪಹರಿಸಲಾಗಿದ್ದು, ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ಕಾರ್ಯಕೈಗೊಂಡಿದ್ದಾರೆ. ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಅಪಹರಣಕಾರರು ಇರುವ ಶಂಕೆ ಮೇಲೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.SHARE THIS

Author:

0 التعليقات: