Wednesday, 9 December 2020

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಭಾರತೀಯ ರೈಲ್ವೆಯಲ್ಲಿ 1.40 ಲಕ್ಷ ಹುದ್ದೆಗಳ ಭರ್ತಿ ಡಿ.15ಕ್ಕೆ ಆರಂಭ


ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಭಾರತೀಯ ರೈಲ್ವೆಯಲ್ಲಿ 1.40 ಲಕ್ಷ ಹುದ್ದೆಗಳ ಭರ್ತಿ ಡಿ.15ಕ್ಕೆ ಆರಂಭ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದ್ದು, ಡಿಸೆಂಬರ್ 15 ರಿಂದ ದೇಶಾದ್ಯಂತ ರೈಲ್ವೆ ರಿಕ್ರೂಟ್ ಮೆಂಟ್ ಬೋರ್ಡ್ (RRB) ಪರೀಕ್ಷೆಗಳು ನಡೆಸಲಿದೆ. ಈ ಮೂಲಕ ಇಲಾಖೆಯಲ್ಲಿ 1.40 ಲಕ್ಷ ಹುದ್ದೆಗಳ ಭರ್ತಿ ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದೆ.

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ 2018ರಲ್ಲಿ ಆರ್ ಆರ್ ಬಿ ಎನ್ ಟಿಪಿಸಿ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಗಳನ್ನು ಕೇಳಲಾಗಿತ್ತು. 2019ರ ಲೋಕಸಭೆ ಚುನಾವಣೆಗೆ ಮುನ್ನ ನಡೆಯಬೇಕಿದ್ದ ಪರೀಕ್ಷೆ ನಡೆಯಬೇಕಾಗಿದ್ದರೂ, ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಡಿಸೆಂಬರ್ 15 ರಿಂದ ಆರ್ ಆರ್ ಬಿ ಪರೀಕ್ಷೆ ನಡೆಯಲಿದೆ.

ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮೊದಲ ಹಂತದಲ್ಲಿ ಐಸೋಲೇಟೆಡ್ ಹಾಗೂ ಮಿನಿಸ್ಟೀಯಲ್ ಕೆಟಗರಿಯ ಪರೀಕ್ಷೆಗಳು ಡಿಸೆಂಬರ್ 15 ರಿಂದ 18 ರವರೆಗೆ ನಡೆಯಲಿವೆ.

ಎರಡನೇ ಹಂತ ಡಿಸೆಂಬರ್ 28 ರಿಂದ 2021 ರ ಮಾರ್ಚ್ ಅಂತ್ಯದವರೆಗೆ ನಡೆಯಲಿದ್ದು, ಗಾರ್ಡ್ ಗಳು, ಆಫೀಸ್ ಕ್ಲರ್ಕ್ಸ್, ಕಮರ್ಷಿಯಲ್ ಕ್ಲರ್ಕ್ಸ್ ಮೊದಲಾದ ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳ ುನಡೆಯಲಿವೆ.

ಮೂರನೇ ಹಂತದ ಪರೀಕ್ಷೆಗಳು 2021 ರ ಏಪ್ರಿಲ್ ನಿಂದ ಜೂನ್ ವರೆಗೆ ನಡೆಯಲಿದ್ದು, ಟ್ರ್ಯಾಕ್ ಮೆಂಟೇನೆನ್ಸರ್, ಪಾಯಿಂಟ್ಸ್ ಮೆನ್ ಹಾಗೂ ವಿವಿಧ ಲೆವೆಲ್-1 ಹುದ್ದೆಗಳಿಗೆ 2021 ರ ಏಪ್ರಿಲ್ ನಿಂದ ಜೂನ್ ವರೆಗೆ ಪರೀಕ್ಷೆ ನಡೆಸುವುದಾಗಿ ಆರ್ ಆರ್ ಬಿ ತಿಳಿಸಿದೆ.

RRB ಗ್ರೂಪ್ ಡಿ ಪರೀಕ್ಷೆ ಪ್ರವೇಶ ಪತ್ರ ಡೌನ್ ಲೋಡ್ ಮಾಡುವುದು ಹೇಗೆ ಇಲ್ಲಿದೆ

1. ವೆಬ್ ಸೈಟ್ rrbcdg.gov.in ಲಾಗ್ ಆನ್ ಮಾಡಿ

2. ವೆಬ್ ಸೈಟ್ ನಲ್ಲಿ ಪ್ರವೇಶ ಕಾರ್ಡ್ ಲಿಂಕ್ ಮೇಲೆ

3. ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಸಬ್ ಮಿಟ್ ಒತ್ತಿ

RRB ಗ್ರೂಪ್ ಡಿ ಪ್ರವೇಶ ಕಾರ್ಡ್ ತೆರೆಯ ಮೇಲೆ ಬರುತ್ತದೆ

ಬಳಿಕ ಪ್ರವೇಶ ಪತ್ರದ ಪ್ರಿಂಟ್ ಔಟ್ ತೆಗೆದುಕೊಳ್ಳಿ



SHARE THIS

Author:

0 التعليقات: