Tuesday, 1 December 2020

ರಾಜ್ಯದಲ್ಲಿ ಇಂದು 1,330 ಜನರಿಗೆ ಹೊಸದಾಗಿ ಕೊರೋನಾ ದೃಢ : ಸೋಂಕಿಗೆ 14 ಜನರು ಬಲಿ


 ರಾಜ್ಯದಲ್ಲಿ ಇಂದು 1,330 ಜನರಿಗೆ ಹೊಸದಾಗಿ ಕೊರೋನಾ ದೃಢ : ಸೋಂಕಿಗೆ 14 ಜನರು ಬಲಿ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಇಂದು ಹೊಸದಾಗಿ 1,330 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 8,86,227ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 1,330 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರಲ್ಲಿ ಬೆಂಗಳೂರು ನಗರದ 758 ಜನರು ಸೇರಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ 8,86,227ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 886 ಸೋಂಕಿತರು ಸೇರಿದಂತೆ ಇದುವರೆಗೆ 8,50,707 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 23,709 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಇಂದು ಬೆಂಗಳೂರು ನಗರದಲ್ಲಿ 9 ಸೋಂಕಿತರು ಸೇರಿದಂತೆ 14 ಸೋಂಕಿತರು ಕೊರೋನಾ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 11,792ಕ್ಕೆ ಏರಿಕೆಯಾಗಿದೆ.


SHARE THIS

Author:

0 التعليقات: