ಜಿಎಸ್ಟಿ ವಿವಾದ ಕೊನೆಗೂ ಸುಖಾಂತ್ಯ: 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ರಾಜ್ಯಗಳಿಂದ ಒಪ್ಪಿಗೆ
ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ನಡುವಿನ ಜಿಎಸ್ಟಿ ಕದನ ಕೊನೆಗೂ ಸುಖಾಂತ್ಯ ಕಂಡಿದ್ದು, ಪರಿಹಾರ ಮೊತ್ತದಲ್ಲಿ ಉಂಟಾದ ಕೊರತೆಯನ್ನ ಸಾಲ ರೂಪದಲ್ಲಿ ಪಡೆಯಲು ರಾಜ್ಯಗಳು ಕೊನೆಗೂ ಒಪ್ಪಿಕೊಂಡಿವೆ.
ಹಣಕಾಸು ಇಲಾಖೆ ಈ ಮಾಹಿತಿ ನೀಡಿದ್ದು, ಆರ್ಬಿಐನಿಂದ ಸ್ಪೆಷಲ್ ವಿಂಡೋ ಮೂಲಕ 1.1 ಲಕ್ಷ ಕೋಟಿ ರೂ. ಸಾಲ ಪಡೆಯುವ ಯೋಜನೆಗೆ ಜಾರ್ಖಂಡ್ ರಾಜ್ಯ ಕೊನೆಯ ರಾಜ್ಯವಾಗಿ ಸೇರ್ಪಡೆಯಾಗಿದೆ ಎಂದಿದೆ.
ಕೇಂದ್ರ ಸರಕಾರ ರಾಜ್ಯಗಳ ಪರವಾಗಿ ಈಗಾಗಲೇ ಐದು ಕಂತುಗಳಲ್ಲಿ 30,000 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಅವುಗಳನ್ನ ರಾಜ್ಯಗಳಿಗೆ ಹಸ್ತಾಂತರಿಸಿದೆ. ಇನ್ನು ಡಿಸೆಂಬರ್ 7ರಂದು ಪಡೆದುಕೊಳ್ಳಲಿರುವ ಮುಂದಿನ ಕಂತಿನಲ್ಲಿ ಜಾರ್ಖಂಡ್ಗೆ ಹಣ ಸಿಗಲಿದೆ.
0 التعليقات: